ಅಹಮದಾಬಾದ್(ಗುಜರಾತ್):ಇಡೀ ಜಗತ್ತಿಗೆ ಕೊರೊನಾ ಕಾಡುತ್ತಿರುವ ಸಂದರ್ಭದಲ್ಲಿಯೂ ಭಾರತದ ಅಭಿವೃದ್ಧಿಯ ವೇಗ ಕಡಿಮೆಯಾಗಲಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದು, ಜೊತೆಗೆ ಭಾರತ ಕೋವಿಡ್ ವಿರುದ್ಧ ಸಮರದಲ್ಲಿ ಯಶಸ್ಸು ಗಳಿಸಿದೆ ಎಂದಿದ್ದಾರೆ.
ಜಗತ್ತಿನ ಅಭಿವೃದ್ಧಿಯ ಚಕ್ರ ಸ್ಥಗಿತವಾದರೂ ಭಾರತದಲ್ಲಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅಭಿವೃದ್ಧಿಯ ವೇಗ ಮುಂದುವರಿಯಿತು. ನಾವು ಕೊರೊನಾ ವಿರುದ್ಧ ಕಠಿಣ ಹೋರಾಟ ನಡೆಸಿ ಅದರಲ್ಲಿಯೂ ಗೆದ್ದೆವು. ಜೊತೆ ಜೊತೆಗೆ ಅಭಿವೃದ್ಧಿಯನ್ನೂ ಮುಂದುವರೆಸಿದ್ದೆವು ಎಂದು ಗುಜರಾತ್ನಲ್ಲಿ ಬಿಜೆಪಿ ಸರ್ಕಾರ 5 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ‘ವಿಕಾಸ್ ದಿವಸ್’ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಜೊತೆಗೆ ಸುಮಾರು 5,300 ಕೋಟಿ ರೂಪಾಯಿ ಯೋಜನೆಗಳಿಗೆ ಚಾಲನೆ ನೀಡಿದ ಅವರು, ಅಮಿತ್ ಶಾ ಅವರ ಗಾಂಧಿ ನಗರ ಕ್ಷೇತ್ರದಲ್ಲಿ ಸುಮಾರು 900 ಕೋಟಿ ರೂಪಾಯಿ ಯೋಜನೆಗಳು ಮುಂಬರುವ ದಿನಗಳಲ್ಲಿ ನೆರವೇರಲಿದೆ ಎಂದಿದ್ದಾರೆ.