ಕರ್ನಾಟಕ

karnataka

ETV Bharat / bharat

1.5 ಲಕ್ಷ ಆಕ್ಸಿಕೇರ್​ ಸಾಧನ ಖರೀದಿಗೆ ಕೇಂದ್ರದ ಅಸ್ತು

ಆಕ್ಸಿಕೇರ್​ ಸಿಸ್ಟಮ್ ಇದು SpO2 ಆಧರಿತ ಆಕ್ಸಿಜನ್ ಪೂರೈಕೆ ವ್ಯವಸ್ಥೆಯಾಗಿದ್ದು, ಸೆನ್ಸಡ್ SpO2 ಲೆವೆಲ್​ ಆಧಾರದಲ್ಲಿ ಕೋವಿಡ್​ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಆಕ್ಸಿಜನ್ ಮಟ್ಟವನ್ನು ನಿರ್ವಹಿಸುತ್ತದೆ.

PM CARES Fund approves procurement of 1.5 lakh Oxycare Systems
1.5 ಲಕ್ಷ ಆಕ್ಸಿಕೇರ್​ ಸಾಧನ ಖರೀದಿಗೆ ಕೇಂದ್ರ ಅಸ್ತು

By

Published : May 12, 2021, 7:41 PM IST

ನವದೆಹಲಿ:ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ತಯಾರಿಸಿದ 1 ಲಕ್ಷ 50 ಸಾವಿರ ಸಂಖ್ಯೆಯ ಆಕ್ಸಿಕೇರ್​ ಸಿಸ್ಟಮ್​ಗಳನ್ನು 322.5 ಕೋಟಿ ರೂಪಾಯಿ ನೀಡಿ ಪಡೆದುಕೊಳ್ಳಲು ಪಿಎಂ ಕೇರ್ಸ್ ಫಂಡ್ ಅನುಮೋದನೆ ನೀಡಿದೆ. ಬುಧವಾರ ಡಿಆರ್​ಡಿಓ ಸ್ವತಃ ಈ ಮಾಹಿತಿ ನೀಡಿದೆ.

ಆಕ್ಸಿಕೇರ್​ ಸಿಸ್ಟಮ್ ಇದು SpO2 ಆಧರಿತ ಆಕ್ಸಿಜನ್ ಪೂರೈಕೆ ವ್ಯವಸ್ಥೆಯಾಗಿದ್ದು, ಸೆನ್ಸಡ್ SpO2 ಲೆವೆಲ್​ ಆಧಾರದಲ್ಲಿ ಕೋವಿಡ್​ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಆಕ್ಸಿಜನ್ ಮಟ್ಟವನ್ನು ನಿರ್ವಹಿಸುತ್ತದೆ.

"ಪಿಎಂ ಕೇರ್ಸ್​ ಅನುಮೋದನೆಯಡಿ, 1 ಲಕ್ಷ ಮ್ಯಾನುವಲ್ ಹಾಗೂ 50 ಸಾವಿರ ಅಟೊಮ್ಯಾಟಿಕ್ ಆಕ್ಸಿಕೇರ್ ಸಿಸ್ಟಮ್​ಗಳು ಹಾಗೂ ಎನ್​ಆರ್​ಬಿಎಂ ಮಾಸ್ಕ್​ (Non-rebreather mask) ಗಳನ್ನು ಪೂರೈಸಲಾಗುತ್ತಿದೆ. ಆಕ್ಸಿಕೇರ್​ ಸಿಸ್ಟಮ್​ ಇದು SpO2 ಲೆವೆಲ್ ಆಧಾರದಲ್ಲಿ ಪೂರಕ ಆಕ್ಸಿಜನ್ ಅನ್ನು ಪೂರೈಸುತ್ತದೆ. ಈ ಮೂಲಕ ರೋಗಿಯು ಮಾರಣಾಂತಿಕವಾದ ಹೈಪೋಕ್ಸಿಯಾ ಹಂತಕ್ಕೆ ಹೋಗುವುದನ್ನು ತಡೆಗಟ್ಟಬಹುದು." ಎಂದು ಡಿಆರ್​ಡಿಒ ಹೇಳಿದೆ.

ಅತ್ಯಂತ ಎತ್ತರದ ಬೆಟ್ಟಗಳಲ್ಲಿ ಕರ್ತವ್ಯ ನಿರ್ವಹಿಸುವ ರಕ್ಷಣಾ ಪಡೆಯ ಯೋಧರಿಗಾಗಿ ಡಿಫೆನ್ಸ್​ ಬಯೊ ಇಂಜಿನಿಯರಿಂಗ್ ಅಂಡ್​ ಎಲೆಕ್ಟ್ರೊ ಮೆಡಿಕಲ್ ಲ್ಯಾಬೊರೇಟರಿ (ಡಿಆರ್​ಡಿಒ ಅಂಗಸಂಸ್ಥೆ) ಈ ವ್ಯವಸ್ಥೆಯನ್ನು ತಯಾರಿಸಿದೆ. ಈಗ ಈ ಸಾಧನವು ಕೋವಿಡ್​ ರೋಗಿಗಳ ಪೂರಕ ಚಿಕಿತ್ಸೆಯಲ್ಲಿ ಹೊಸ ಆಶಾಕಿರಣವಾಗಿ ಹೊರಹೊಮ್ಮಿದೆ.

(ಓದಿ : ಕೋವಿಡ್​ ನಿಯಂತ್ರಣಕ್ಕೆ 6 ರಿಂದ 8 ವಾರಗಳ ಲಾಕ್​ಡೌನ್​ ಅನಿವಾರ್ಯ: ಐಸಿಎಂಆರ್ ಮುಖ್ಯಸ್ಥ)

ABOUT THE AUTHOR

...view details