ಕರ್ನಾಟಕ

karnataka

ETV Bharat / bharat

'ಅದ್ಧೂರಿ ಮದುವೆಯಾಗಿ ಹಣ ವ್ಯರ್ಥ ಮಾಡಬೇಡಿ..': ನವಜೋಡಿಗಳಿಗೆ ಪ್ರಧಾನಿ ಮೋದಿ ಕಿವಿಮಾತು

ತಂದೆಯನ್ನು ಕಳೆದುಕೊಂಡ 551 ಯುವತಿಯರ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡು ನವ ಜೋಡಿಗಳಿಗೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಕಿವಿಮಾತು ಹೇಳಿದರು.

By

Published : Nov 7, 2022, 8:40 AM IST

pm modi
ನವ ಜೋಡಿಗಳಿಗೆ ಶುಭ ಹಾರೈಸಿದ ಪಿಎಂ

ಭಾವನಗರ್(ಗುಜರಾತ್‌): ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗುಜರಾತ್‌ನ ಭಾವನಗರದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಸಮಾಜಕ್ಕೆ ಕೈಲಾದ ಕೊಡುಗೆ ನೀಡುವಂತೆ ನೂತನ ವಧು ವರರಿಗೆ ಮನವಿ ಮಾಡಿದರು.

ಇಲ್ಲಿನ ಜವಾಹರ್ ಮೈದಾನದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಂದೆ ಕಳೆದುಕೊಂಡ 551 ಯುವತಿಯರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮಹೋತ್ಸವದಲ್ಲಿ ಮೋದಿ ಪಾಲ್ಗೊಂಡು ನವ ಜೋಡಿಗಳಿಗೆ ಶುಭ ಹಾರೈಸಿದರು. "ಇಲ್ಲಿ ಮದುವೆಯಾಗಿರುವ ನವ ಜೋಡಿಗಳು, ಮನೆಯವರ ಒತ್ತಾಯಕ್ಕೆ, ಸಂಬಂಧಿಕರ ಒತ್ತಾಯಕ್ಕೆ ಗಂಟುಬಿದ್ದು ಮತ್ತೆ ಅದ್ಧೂರಿಯಾಗಿ ಮದುವೆಯಾಗಬೇಡಿ. ಸುಖಾಸುಮ್ಮನೆ ಹಣ ವ್ಯರ್ಥ ಮಾಡಬೇಡಿ. ಜೀವನದಲ್ಲಿ ಸುಖ, ಶಾಂತಿ ನೆಮ್ಮದಿಯಿಂದಿರಿ" ಎಂದು ಪ್ರಧಾನಿ ಕಿವಿಮಾತು ಹೇಳಿದರು.

ಇದನ್ನೂ ಓದಿ:'ನಾನು ಸೃಷ್ಟಿಸಿದ ಗುಜರಾತ್​..' ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ಘೋಷಣೆ

ಗುಜರಾತ್ ರಾಜ್ಯವು ಕ್ರಮೇಣವಾಗಿ ಸಾಮೂಹಿಕ ವಿವಾಹ ಪದ್ಧತಿಯನ್ನು ಅಳವಡಿಸಿಕೊಂಡು ಬರುತ್ತಿದೆ. ಮೊದಲು, ಜನರು ಕೇವಲ ಪ್ರದರ್ಶನಕ್ಕಾಗಿ ಅದ್ಧೂರಿ ಮದುವೆ ಸಮಾರಂಭಗಳನ್ನು ಆಯೋಜಿಸಲು ಸಾಲವಾಗಿ ಹಣ ತೆಗೆದುಕೊಳ್ಳುತ್ತಿದ್ದರು. ಆದರೆ ಈಗ ಜಾಗೃತರಾಗಿದ್ದಾರೆ. ಸಾಮೂಹಿಕ ವಿವಾಹ ಕಾರ್ಯಕ್ರಮಗಳತ್ತ ಮುಖ ಮಾಡಿದ್ದಾರೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಸೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ನರೇಂದ್ರ ಮೋದಿ ಗುಜರಾತ್‌ ಪ್ರವಾಸದಲ್ಲಿದ್ದಾರೆ. ಡಿಸೆಂಬರ್ 1 ಹಾಗೂ ಡಿ.5ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿ.8 ರಂದು ಮತ ಎಣಿಕೆ ನಿಗದಿಯಾಗಿದೆ. ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಅವರು ವಲ್ಸಾದ್ ಜಿಲ್ಲೆಯಲ್ಲಿ ನಡೆದ ಸಾವರ್ಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದರು.

ABOUT THE AUTHOR

...view details