ಕರ್ನಾಟಕ

karnataka

ETV Bharat / bharat

ಶ್ರೀನಗರದ ತುಲಿಪ್ ಗಾರ್ಡನ್‌ಗೆ ಭೇಟಿ ನೀಡುವಂತೆ ಕರೆ ನೀಡಿದ ಪ್ರಧಾನಿ ಮೋದಿ.. ಏನಿದರ ವಿಶೇಷ? - ಜಮ್ಮು ಕಾಶ್ಮೀರ ತುಲಿಪ್ ಉತ್ಸವ

ತುಲಿಪ್ ಉತ್ಸವವು ವಾರ್ಷಿಕ ಆಚರಣೆಯಾಗಿದೆ. ಇದು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಪ್ರವಾಸೋದ್ಯಮ ಪ್ರಚಾರದ ಪ್ರಯತ್ನದ ಭಾಗವಾಗಿದ್ದು, ಉದ್ಯಾನದಲ್ಲಿ ಹೂವುಗಳ ಶ್ರೇಣಿ ಪ್ರದರ್ಶಿಸುವ ಗುರಿ ಹೊಂದಿದೆ..

garden
garden

By

Published : Mar 24, 2021, 8:00 PM IST

ಶ್ರೀನಗರ (ಜಮ್ಮು ಕಾಶ್ಮೀರ) :ತುಲಿಪ್ ಉತ್ಸವದಲ್ಲಿ ಭಾಗಿಯಾಗಲು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವಂತೆ ಮತ್ತು ಇಲ್ಲಿನ ಜನರ ಆತ್ಮೀಯ ಆತಿಥ್ಯ ಅನುಭವಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ.

"ನಿಮಗೆ ಅವಕಾಶ ಸಿಕ್ಕಾಗಲೆಲ್ಲಾ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ. ಸುಂದರವಾದ ತುಲಿಪ್ ಉತ್ಸವಕ್ಕೆ ಸಾಕ್ಷಿಯಾಗಿ. ಜೊತೆಗೆ ಜಮ್ಮು ಮತ್ತು ಕಾಶ್ಮೀರದ ಜನರ ಆತ್ಮೀಯ ಆತಿಥ್ಯವನ್ನು ನೀವು ಅನುಭವಿಸುವಿರಿ" ಎಂದು ಮೋದಿ ತಮ್ಮ ಟ್ವೀಟ್​ನಲ್ಲಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್

ಶ್ರೀನಗರದ ತುಲಿಪ್ ಉದ್ಯಾನವನ್ನು ಗುರುವಾರ ಸಾರ್ವಜನಿಕರಿಗಾಗಿ ತೆರೆಯಲು ನಿರ್ಧರಿಸಲಾಗಿದೆ. "ನಾಳೆ ಮಾರ್ಚ್ 25, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ದಿನವಾಗಿದೆ. ಜಬರ್ವಾನ್ ಪರ್ವತಗಳ ತಪ್ಪಲಿನಲ್ಲಿರುವ ಭವ್ಯವಾದ ತುಲಿಪ್ ಉದ್ಯಾನವನವು ಪ್ರವಾಸಿಗರಿಗಾಗಿ ತೆರೆಯುತ್ತದೆ. ಉದ್ಯಾನದಲ್ಲಿ 64ಕ್ಕೂ ಹೆಚ್ಚು ಪ್ರಭೇದಗಳ 15 ಲಕ್ಷಕ್ಕೂ ಹೆಚ್ಚು ಹೂವುಗಳು ಅರಳುತ್ತವೆ" ಎಂದು ಪ್ರಧಾನಿ ಮತ್ತೊಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್

ತುಲಿಪ್ ಉತ್ಸವವು ವಾರ್ಷಿಕ ಆಚರಣೆಯಾಗಿದೆ. ಇದು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಪ್ರವಾಸೋದ್ಯಮ ಪ್ರಚಾರದ ಪ್ರಯತ್ನದ ಭಾಗವಾಗಿದ್ದು, ಉದ್ಯಾನದಲ್ಲಿ ಹೂವುಗಳ ಶ್ರೇಣಿ ಪ್ರದರ್ಶಿಸುವ ಗುರಿ ಹೊಂದಿದೆ.

ABOUT THE AUTHOR

...view details