ಕರ್ನಾಟಕ

karnataka

ETV Bharat / bharat

'ನನ್ನ ತಂದೆಗೆ ಹೊಡಿಬೇಡಿ'... ನಡುರಸ್ತೆಯಲ್ಲೇ ಕಣ್ಣೀರು ಹಾಕಿದ ಮಗಳು! - ಪೊಲೀಸರಿಂದ ವ್ಯಕ್ತಿ ಮೇಲೆ ಹಲ್ಲೆ, ಮಗಳು ಕಣ್ಣೀರು

ಹೆಲ್ಮೆಟ್​ ಹಾಕಿಕೊಂಡಿಲ್ಲ ಎಂಬ ಕಾರಣವನ್ನಿಟ್ಟುಕೊಂಡು ಸಬ್​​ ಇನ್ಸ್​​ಪೆಕ್ಟರ್​ ಒಬ್ಬರು ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ್ದು, ಈ ವೇಳೆ ಆತನೊಂದಿಗೆ ಇದ್ದ ಮಗಳು ಕಣ್ಣೀರು ಹಾಕಿದ್ದಾಳೆ.

Telangana man assaulted by a policeman
Telangana man assaulted by a policeman

By

Published : Dec 7, 2021, 4:41 PM IST

ಮಹಬೂಬಾಬಾದ್​​(ತೆಲಂಗಾಣ):8 ವರ್ಷದ ಮಗಳೊಂದಿಗೆ ಮಾರ್ಕೆಟ್​​ಗೆ ತೆರಳಿ ದ್ವಿಚಕ್ರ ವಾಹನದ ಮೇಲೆ ವಾಪಸ್​​ ಬರುತ್ತಿದ್ದ ವೇಳೆ ವ್ಯಕ್ತಿಯೊಬ್ಬರನ್ನು ತಡೆದಿರುವ ಪೊಲೀಸರು ಹೆಲ್ಮೆಟ್​​ ಹಾಕಿಲ್ಲ ಎಂಬ ಕಾರಣಕ್ಕಾಗಿ ಥಳಿಸಿದ್ದಾರೆ. ಈ ವೇಳೆ 'ನನ್ನ ತಂದೆಗೆ ಹೊಡಿಬೇಡಿ' ಎಂದು ಮಗಳು ಕಣ್ಣೀರು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​​​ ಆಗಿದೆ.

ನಮ್ಮಪ್ಪನಿಗೆ ಹೊಡಿಯಬೇಡಿ ಎಂದು ಕಣ್ಣೀರು ಹಾಕಿದ ಬಾಲಕಿ

ತೆಲಂಗಾಣದ ಮೆಹಬೂಬಾಬಾದ್​​​ನಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಶ್ರೀನಿವಾಸ್​​​ ತಮ್ಮ ಮಗಳೊಂದಿಗೆ ತರಕಾರಿ ಖರೀದಿಗೆ ತೆರಳಿದ್ದರು. ಈ ವೇಳೆ, ಹೆಲ್ಮೆಟ್​​ ಹಾಕಿಕೊಳ್ಳದೇ ಹಿಂತಿರುಗುತ್ತಿದ್ದಾಗ ಟ್ರಾಫಿಕ್​​ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ದ್ವಿಚಕ್ರ ವಾಹನ ನಿಲ್ಲಿಸಿ, ಅದರ ಕೀ ತೆಗೆದುಕೊಂಡಿರುವ ಸಬ್​​​ ಇನ್ಸ್​​ಪೆಕ್ಟರ್ ಆತನ ಮೇಲೆ​​​​​ ಹಲ್ಲೆ ಮಾಡಿದ್ದಾರೆ. ಈ ವೇಳೆ, ತಾನು ದಂಡ ಕಟ್ಟಲು ಸಿದ್ಧನಿರುವುದಾಗಿ ಶ್ರೀನಿವಾಸ್​ ತಿಳಿಸಿದರೂ, ಪೊಲೀಸ್​​​ ಒಪ್ಪಿಕೊಂಡಿಲ್ಲ. ತಂದೆಯ ಮೇಲೆ ಹಲ್ಲೆ ಮಾಡಿರುವುದನ್ನ ನೋಡಿರುವ ಮಗಳು 'ನಮ್ಮಪ್ಪನಿಗೆ ಹೊಡೆಯಬೇಡಿ' ಎಂದು ಕಣ್ಣೀರು ಹಾಕಿದ್ದಾಳೆ.

ಇದನ್ನೂ ಓದಿರಿ:"No UPA" ಎಂದ ಮಮತಾ.. ಕುತೂಹಲ ಕೆರಳಿಸಿದ ಸಂಜಯ್​ ರಾವತ್​​-ರಾಹುಲ್ ಗಾಂಧಿ ಭೇಟಿ

ಇನ್ನು, ಪೊಲೀಸರ ನಡೆ ಪ್ರಶ್ನೆ ಮಾಡಿರುವ ಶ್ರೀನಿವಾಸ್​​​ 'ನೀವೂ ನನಗ್ಯಾಕೆ ಹೊಡೆಯುತ್ತಿದ್ದೀರಿ? ದಂಡ ವಿಧಿಸಿ, ಚಲನ್​ ನೀಡಿ' ಎಂದು ಪ್ರಶ್ನೆ ಮಾಡಿದ್ದಾರೆ. ಚಿಕ್ಕ ಬಾಲಕಿ ಕಣ್ಣೀರು ಹಾಕಲು ಶುರು ಮಾಡುತ್ತಿದ್ದಂತೆ ಸ್ಥಳೀಯರು ಒಟ್ಟಿಗೆ ಸೇರಿದ್ದು, ಪೊಲೀಸರ ನಡೆಯನ್ನ ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಅನೇಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details