ಕರ್ನಾಟಕ

karnataka

By

Published : Nov 5, 2020, 4:28 PM IST

ETV Bharat / bharat

ಪಟಾಕಿ ಸಿಡಿಸಬೇಡಿ, ಮನೆಯಿಂದಲೇ ಲಕ್ಷ್ಮಿ ಪೂಜೆಯಲ್ಲಿ ಭಾಗಿಯಾಗಿ: ಕೇಜ್ರಿವಾಲ್ ಮನವಿ

ದೀಪಾವಳಿ ವೇಳೆ ಪಟಾಕಿ ಸಿಡಿಸದಂತೆ ಈಗಾಗಲೇ ಅನೇಕ ರಾಜ್ಯಗಳು ಕ್ರಮ ಕೈಗೊಂಡಿದ್ದು, ಇದೀಗ ದೆಹಲಿಯಲ್ಲೂ ಈ ಯೋಜನೆ ಜಾರಿಗೊಳಿಸಲು ಕೇಜ್ರಿವಾಲ್​ ಮುಂದಾಗಿದ್ದಾರೆ.

Arvind Kejriwal
Arvind Kejriwal

ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಮಾಡಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದು, ಯಾವುದೇ ಕಾರಣಕ್ಕೂ ಪಟಾಕಿ ಸಿಡಿಸಬೇಡಿ ಎಂದು ದೆಹಲಿ ಜನರಿಗೆ ಸಂದೇಶ ರವಾನೆ ಮಾಡಿದ್ದಾರೆ.

ದೆಹಲಿ ಜತೆ ಬಳಿ ಕೇಜ್ರಿವಾಲ್​ ಮನವಿ

ದಯವಿಟ್ಟು ಯಾವುದೇ ಕಾರಣಕ್ಕೂ ಪಟಾಕಿ ಸಿಡಿಸಬೇಡಿ, ಇವುಗಳನ್ನ ಸಿಡಿಸುವುದರಿಂದ ನಿಮ್ಮ ಸ್ವಂತ ಕುಟುಂಬಕ್ಕೆ ತೊಂದರೆ ನೀಡುವುದರ ಜತೆಗೆ ಅವರ ಪ್ರಾಣದೊಂದಿಗೆ ನೀವೇ ಆಟವಾಡಿದ ರೀತಿಯಾಗಿರುತ್ತವೆ. ನವೆಂಬರ್​ 14ರಂದು ಸಂಜೆ 7:49ರಿಂದ ದೆಹಲಿಯ 2 ಕೋಟಿ ನಾಗರಿಕರು ಲಕ್ಷ್ಮಿ ಪೂಜೆಯಲ್ಲಿ ಮನೆಯಿಂದ ಭಾಗಿಯಾಗಲಿದ್ದಾರೆ. ನಾನು ಕೂಡ ಪೂಜೆ ಆರಂಭ ಮಾಡಲಿದ್ದು, ಇದರ ನೇರ ಪ್ರಸಾರ ಟಿವಿಯಲ್ಲಿ ಇರಲಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ದೆಹಲಿಯ 2 ಕೋಟಿ ಜನರು ಒಟ್ಟಿಗೆ ಸೇರಿ ಲಕ್ಷ್ಮಿ ಪೂಜೆ ಹಾಗೂ ದೀಪಾವಳಿ ಆಚರಣೆ ಮಾಡುವುದರಿಂದ ನಮಗಿರುವ ಕಷ್ಟಗಳೆಲ್ಲವೂ ದೂರ ಆಗಲಿವೆ ಎಂದಿದ್ದಾರೆ.

ABOUT THE AUTHOR

...view details