ನವದೆಹಲಿ:ಸಲಿಂಗಿಗಳ ವಿವಾಹವನ್ನ ವಿಶೇಷ ವಿವಾಹ ಕಾಯ್ದೆಯಡಿ ಮಾತ್ರ ನೋಂದಣಿ ಮಾಡಬೇಕು, ಹಿಂದೂ ವಿವಾಹ ಕಾಯ್ದೆಯಡಿ ಇದಕ್ಕೆ ಅವಕಾಶ ನೀಡದಂತೆ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.
ಹಿಂದೂ ಮತ್ತು ವಿದೇಶಿ ವಿವಾಹ ಕಾನೂನುಗಳ ಅಡಿ ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡಲು ಕೋರಿ ಹಲವಾರು ಸಲಿಂಗ ದಂಪತಿಗಳು ಸಲ್ಲಿಸಿದ ಅರ್ಜಿಗಳನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಹಿಂದೂ ವಿವಾಹ ಕಾಯ್ದೆಯಡಿ ಇದಕ್ಕೆ ಅವಕಾಶ ನೀಡಬಾರದು ಎಂದು ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.
ಹಿಂದೂ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹಗಳ ನೋಂದಣಿ ವಿರುದ್ಧ ದೆಹಲಿ ಹೈಕೋರ್ಟ್ಗೆ ಸೇವಾ ನ್ಯಾಯ್ ಉತ್ಥಾನ್ ಫೌಂಡೇಶನ್ಗೆ ಸೇರಿರುವ ಸಂಜೀವ್ ನೇವಾರ್ ಮತ್ತು ಸ್ವಾತಿ ಗೋಯೆಲ್ ಶರ್ಮಾ ಅರ್ಜಿ ಸಲ್ಲಿಕೆ ಮಾಡಿದ್ದಾರೆ.