ಕರ್ನಾಟಕ

karnataka

ETV Bharat / bharat

ಪಿಎಂ ಮೋದಿ ಭದ್ರತಾ ಲೋಪ ವಿಚಾರ: ಸುಪ್ರೀಂನಲ್ಲಿ ಇಂದು ವಿಚಾರಣೆ - ಭದ್ರತಾ ಲೋಪದ ಸಾಕ್ಷ್ಯಗಳನ್ನು ಸಂರಕ್ಷಿಸಲು ಪಂಜಾಬ್​ ಅಧಿಕಾರಿಗಳು ಸುಪ್ರೀಂ ನಿರ್ದೇಶನ

ಪ್ರಧಾನಮಂತ್ರಿ ಭೇಟಿ ಹಿನ್ನೆಲೆಯಲ್ಲಿ ಕೈಗೊಂಡ ಭದ್ರತಾ ಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸುರಕ್ಷಿತವಾಗಿರಿಸಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಸುಪ್ರೀಂಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.

http://10.10.50.85//tamil-nadu/05-January-2022/stuck_0501newsroom_1641375760_519.jfif
PM Modi's security breach: Supreme Court to hear plea today

By

Published : Jan 10, 2022, 9:21 AM IST

ನವದೆಹಲಿ:ಪ್ರಧಾನಿಯವರ ‘ಭದ್ರತಾ ಲೋಪ’ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ಸಹ ನಡೆಸಲಿದೆ. ‘ಲಾಯರ್ಸ್​ ವಾಯ್ಸ್​’ ಎಂಬ ಸಂಘಟನೆ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸುತ್ತಿದೆ.

ಪ್ರಧಾನಮಂತ್ರಿ ಭೇಟಿ ಹಿನ್ನೆಲೆಯಲ್ಲಿ ಕೈಗೊಂಡ ಭದ್ರತಾ ಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸುರಕ್ಷಿತವಾಗಿರಿಸಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಸುಪ್ರೀಂಕೋರ್ಟ್ ಶುಕ್ರವಾರ ನಿರ್ದೇಶನ ನೀಡಿತ್ತು. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಪ್ರತ್ಯೇಕವಾಗಿ ರಚಿಸಿರುವ ವಿಚಾರಣಾ ಸಮಿತಿಗಳಿಗೆ ಮುಂದಿನ ವಿಚಾರಣೆವರೆಗೆ ತನಿಖೆ ಮುಂದುವರಿಸದಂತೆ ಸೂಚನೆ ನೀಡಿತ್ತು.

ಪ್ರಧಾನಿ ಮೋದಿಯವರು ಜನವರಿ 5ರಂದು ಪಂಜಾಬ್​ ರಾಜ್ಯದಲ್ಲಿ ಓಡಾಡಿದ ಎಲ್ಲಾ ಸ್ಥಳಗಳ ದಾಖಲೆ ಮತ್ತು ಪ್ರಧಾನಿ ಓಡಾಡಲು ಇದ್ದ ಸೌಕರ್ಯಗಳ ದಾಖಲೆಗಳನ್ನು ಸಂಗ್ರಹಿಸುವಂತೆ ಪಂಜಾಬ್ ಹೈಕೋರ್ಟ್​ನ ಉನ್ನತ ಅಧಿಕಾರಿಯೊಬ್ಬರಿಗೆ ಸೂಚನೆ ಸಹ ನೀಡಿದೆ.

ಸುಪ್ರೀಂಕೋರ್ಟ್​ನ ತ್ರಿಸದಸ್ಯ ಪೀಠವು ಪ್ರಧಾನಿ ಭೇಟಿಯ ವೇಳೆಯಲ್ಲಾದ ಭದ್ರತಾ ಲೋಪದ ಸಾಕ್ಷ್ಯಗಳನ್ನು ಸಂರಕ್ಷಿಸಲು ಮತ್ತು ತಪ್ಪು ಮಾಡಿದ ಪಂಜಾಬ್​ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ, ಈ ಆದೇಶ ನೀಡಿದೆ.

ಇದನ್ನೂ ಓದಿ:ಕನ್ನಡದ ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ್ ಪಾಟೀಲ್​ ನಿಧನ

ABOUT THE AUTHOR

...view details