ಜೈಪುರ: ಪಬ್ಜಿ ಗೇಮ್ನಿಂದ ಆಗುವ ಅನಾಹುತಗಳು ಒಂದೆರಡಲ್ಲ. ರೈಲ್ವೆ ಹಳಿ ಮೇಲೆ ಕುಳಿತು ಮೊಬೈಲ್ ಫೋನ್ನಲ್ಲಿ ಪಬ್ಜಿ ಆಡುವುದರಲ್ಲಿ ಮಗ್ನರಾಗಿದ್ದ ಇಬ್ಬರು ಸಹೋದರರ ಮೇಲೆ ರೈಲು ಹರಿದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.
ಲೋಕೇಶ್ ಮೀನಾ (22) ಮತ್ತು ಆತನ ಕಿರಿಯ ಸಹೋದರ ರಾಹುಲ್ (19) ಮೃತರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಸಹೋದರರು ರೂಪಬಾಸ್ ಪಟ್ಟಣದ ರೈಲ್ವೆ ಹಳಿಯಲ್ಲಿ ಕುಳಿತು ಪಬ್ಜಿ ಆಡುತ್ತಿದ್ದರು. ಗೇಮ್ನಲ್ಲೇ ಮುಳುಗಿಹೋದ ಯುವಕರು, ರೈಲು ಬರುವುದನ್ನು ನೋಡಲೇ ಇಲ್ಲ. ಪರಿಣಾಮ ರೈಲು ಇಬ್ಬರ ಮೇಲೆ ಹರಿದಿದೆ ಎಂದು ಸದರ್ ಠಾಣೆಯ ಇನ್ಸ್ಪೆಕ್ಟರ್ ನೋಹರ್ ಲಾಲ್ ಹೇಳಿದ್ದಾರೆ.