ನವದಹೆಲಿ:ರಾಷ್ಟ್ರ ರಾಜಧಾನಿಯಲ್ಲಿ ಶಬ್ದ ಮಾಲಿನ್ಯ ನಿಂತ್ರಣಕ್ಕೆ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇನ್ಮುಂದೆ ಸಭೆ, ಸಮಾರಂಭಗಳಲ್ಲಿ ನಿಯಮ ಉಲ್ಲಂಘಿಸಿ ಧ್ವನಿವರ್ಧಕಗಳ ಮೂಲಕ ಶಬ್ದ ಮಾಲಿನ್ಯ ಮಾಡಿದರೆ 1 ಲಕ್ಷದ ವರೆಗೆ ದಂಡ ವಿಧಿಸುವುದಾಗಿ ಹೇಳಿದೆ. ಶಬ್ದ ಮಾಲಿನ್ಯದ ದಂಡದ ದರ ಪರಿಷ್ಕರಿಸಿರುವ ಸರ್ಕಾರ, ಹಬ್ಬಗಳ ಸಮಯದಲ್ಲಿ ಮನೆ, ವಸತಿ ಪ್ರದೇಶಗಳಲ್ಲಿ ನಿಗದಿಗಿಂತ ಹೆಚ್ಚಿನ ಅವಧಿಯಲ್ಲಿ ಪಟಾಕಿ ಸಿಡಿಸಿದರೆ 1 ಸಾವಿರ ದಂಡ. ಸೈಲೆಂಟ್ ವಲಯಗಳಲ್ಲಿ ನಿಯಮ ಉಲ್ಲಂಘಿಸಿದರೆ 3 ಸಾವಿರ ದಂಡ ವಿಧಿಸಲಿದೆ.
ಮದುವೆ, ಸಾರ್ವಜನಿಕ ರ‍್ಯಾಲಿಗಳು ಮತ್ತು ವಸತಿ ಪ್ರದೇಶಗಳಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ನಿಯಮ ಉಲ್ಲಂಘಿ ಪಟಾಕಿ ಸುಟ್ಟರೆ 10,000 ರೂ, ಸೈಲೆಂಟ್ ವಲಯಗಳಲ್ಲಿ ಈ ದಂಡ ಮೊತ್ತ 20,000 ಇದೆ. ಇದೇ ಪ್ರದೇಶಗಳಲ್ಲಿ 2ನೇ ಬಾರಿ ನಿಯಮ ಉಲ್ಲಂಘಟಿಸಿದ್ರೆ 40 ಸಾವಿರ ಹಾಗೂ 1 ಲಕ್ಷಕ್ಕಿಂತ ಹೆಚ್ಚಿನ ದಂಡವನ್ನು ವಿಧಿಸುತ್ತದೆ. ಮಾತ್ರವಲ್ಲದೆ ಪ್ರದೇಶವನ್ನು ಸೀಲ್ ಮಾಡುವ ಎಚ್ಚರಿಕೆಯನ್ನೂ ಸರ್ಕಾರ ನೀಡಿದೆ.