ಚಂಡೀಗಢ: ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆಗೆ ಬೇಡಿಕೆ ಹೆಚ್ಚಿದೆ. ಕೋವಿಡ್ನಿಂದ ಬದುಕುಳಿದವರು ಮುಂದೆ ಬಂದು ತಮ್ಮ ಪ್ಲಾಸ್ಮಾವನ್ನು ಸೋಂಕಿತರಿಗೆ ದಾನ ಮಾಡುವಂತೆ ವೈದ್ಯರು ಒತ್ತಾಯಿಸುತ್ತಿದ್ದಾರೆ. ಇದರಿಂದ ಸೋಂಕಿತರು ಶೀಘ್ರವಾಗಿ ಚೇತರಿಸಿಕೊಳ್ಳುತ್ತಾರೆ. ಆದರೂ ಹೆಚ್ಚಿನ ಜನರು ಗೊಂದಲ ಮತ್ತು ಅರಿವಿನ ಕೊರತೆಯಿಂದ ಪ್ಲಾಸ್ಮಾವನ್ನು ದಾನ ಮಾಡುತ್ತಿಲ್ಲ.
ಪ್ಲಾಸ್ಮಾ ದಾನ ಮಾಡುವುದರಿಂದ ಕೋವಿಡ್ ಸೋಂಕು ಹರಡುವುದಿಲ್ಲ: ವೈದ್ಯರ ಸ್ಪಷ್ಟನೆ - ಪ್ಲಾಸ್ಮಾ ಚಿಕಿತ್ಸೆ
ಕೋವಿಡ್ನಿಂದ ಗುಣಮುಖರಾದವರು ತಮ್ಮ ಪ್ಲಾಸ್ಮಾವನ್ನ ಇತರ ಸೋಂಕಿತರಿಗೆ ನೀಡುವುದರಿಂದ ಅವರೂ ಬೇಗ ಗುಣಮುಖರಾಗಬಹುದು. ಆದರೆ ತುಂಬಾ ಜನ ಗೊಂದಲ ಮತ್ತು ಅರಿವಿನ ಕೊರತೆಯಿಂದ ಪ್ಲಾಸ್ಮಾವನ್ನು ದಾನ ಮಾಡುತ್ತಿಲ್ಲ ಎಂದು ಚಂಡೀಗಢದ ರಕ್ತ ವರ್ಗಾವಣೆ ವಿಭಾಗದ ಹೆಚ್‌ಒಡಿ ಡಾ.ರತಿರಾಮ್ ಶರ್ಮಾ ಹೇಳಿದ್ದಾರೆ.
3x2
ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಚಂಡೀಗಢದ ರಕ್ತ ವರ್ಗಾವಣೆ ವಿಭಾಗದ ಹೆಚ್‌ಒಡಿ ಡಾ.ರತಿರಾಮ್ ಶರ್ಮಾ, ಕೋವಿಡ್ -19 ಬಗ್ಗೆ ಹಲವಾರು ತಪ್ಪು ಕಲ್ಪನೆಗಳು ಜನರಲ್ಲಿ ಹರಡುತ್ತಿವೆ ಎಂದು ಹೇಳಿದರು. ಪ್ಲಾಸ್ಮಾ ಅಥವಾ ರಕ್ತದಾನವು ಕೊರೊನಾ ಸೋಂಕಿಗೆ ಕಾರಣವಾಗಬಹುದು ಎಂದು ಹೆಚ್ಚಿನ ಜನರು ಅಂದುಕೊಳ್ಳುತ್ತಾರೆ. ಆದರೆ ಇದು ಸುಳ್ಳು, ಏಕೆಂದರೆ ಕೊರೊನಾ ವೈರಸ್ ಬಾಯಿ ಮತ್ತು ಮೂಗಿನ ಮೂಲಕ ಹರಡುತ್ತದೆ ಮತ್ತು ಇದು ಗಂಟಲು ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಇದು ರಕ್ತ ಅಥವಾ ಪ್ಲಾಸ್ಮಾ ದಾನಕ್ಕೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.