ಅನಂತಪುರ (ಆಂಧ್ರಪ್ರದೇಶ):ಸಾಮಾನ್ಯವಾಗಿ ನಾವು ನೀವೆಲ್ಲಾ ಎಷ್ಟೇ ಬೆಲೆ ಬಾಳುವ ಪೆನ್ನು ಖರೀದಿಸಿದ್ರೂ, ಅದು ಖಾಲಿಯಾದ ತಕ್ಷಣ ಬಿಸಾಡುತ್ತೇವೆ. ಆದರೆ, ಇಲ್ಲೊಂದು ಪೆನ್ನನ್ನು ನಾವು ಖಾಲಿಯಾದ ಬಳಿಕ ಬಿಸಾಡಿದರೆ, ಅದರಿಂದ ಮೂರು ಬಗೆಯ ಗಿಡಗಳು ಹುಟ್ಟುತ್ತವೆ. ಆಂಧ್ರಪ್ರದೇಶದ ಅನಂತಪುರ ನಗರದ ಎಜಿಎಸ್ ಟ್ರಸ್ಟ್ ಆಶ್ರಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಈ ಪೆನ್ಗಳನ್ನು ವಿತರಿಸಲಾಗುತ್ತಿದೆ.
ಪ್ಲಾಸ್ಟಿಕ್ ನಿಷೇಧದ ಹಿನ್ನೆಲೆ ಪರಿಸರಕ್ಕೆ ಅನುಕೂಲವಾಗುವಂತೆ ಪೆನ್ನುಗಳನ್ನು ವಿಶೇಷವಾಗಿ ತಯಾರಿಸಲಾಗಿದೆ. ಈ ಪೆನ್ಗಳನ್ನು ಕಾಗದದಿಂದ ತಯಾರಿಸಲಾಗಿದ್ದು, ಇದರ ಒಂದು ಬದಿಯಲ್ಲಿ ಬರೆಯಲು ಬೇಕಾಗುವ ಪೆನ್ನಿನ ಕಡ್ಡಿ ಇರುತ್ತದೆ. ಮತ್ತೊಂದು ಬದಿಯಲ್ಲಿ (ಮೇಲಿನ ಭಾಗ) ಮಣ್ಣಿನಲ್ಲಿ ಬೆರೆಯುವ ಗುಣ ಹೊಂದಿರುವ ಕ್ಯಾಪ್ಸೂಲ್ ಇದೆ.