ಟ್ಯಾಟೂ ಎಂಬುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಈ ಹಿಂದೆ ಹಚ್ಚೆ ಹಾಕಿಕೊಳ್ಳುವ ಸಂಪ್ರದಾಯವಿತ್ತು. ಆದ್ರೆ, ಇದೀಗ ಕಾಲ ಬದಲಾದಂತೆ, ಹಚ್ಚೆ ಬದಲಿಗೆ ಟ್ಯಾಟೂ ಹಾಕಿಸಿಕೊಳ್ಳುವ ಟ್ರೆಂಡ್ ಬಂದಿದೆ. ಇದು ತುಂಬಾ ಆಕರ್ಷಕವಾಗಿದ್ದು, ಶಕ್ತಿ, ಬಲ ಮತ್ತು ಬುದ್ಧಿವಂತಿಕೆಯ ಸಂಕೇತವಾಗಿದೆ. ಟ್ಯಾಟೂ ಎಂಬುದು ಗ್ರೀಕ್ನ ಪುರಾಣಗಳಿಗೆ ಸಂಬಂಧಿಸಿದೆ. ಇದು ಕಳೆದ ಕೆಲ ವರ್ಷಗಳಿಂದ ತುಂಬಾ ಟ್ರೆಂಡ್ ಆಗುತ್ತಿದೆ.
ಹೊಲೊಗ್ರಾಮ್ ಟ್ಯಾಟೂಗಳು ತಾತ್ಕಾಲಿಕವಾಗಿದ್ದು, ಮಳೆ ಬಿಲ್ಲಿನ ಬಣ್ಣದಲ್ಲಿ ಮಿನುಗುತ್ತಿರುತ್ತವೆ. ಆದ್ರೆ ಹೆಚ್ಚು ಜನಪ್ರಿಯವಾಗಿವೆ. ಏಕೆಂದರೆ ಈ ಟ್ಯಾಟೂ ಬೆಳಕಿಗೆ ತಕ್ಕಂತೆ ಬಣ್ಣವನ್ನು ಬದಲಿಸುತ್ತದೆ. ಇದು ಭಾರತದಲ್ಲಿ ಬಹಳ ಟ್ರೆಂಟ್ ಆಗುತ್ತಿದೆ.
ಕಡಿಮೆ ಡಿಸೈನ್ ಇರುವ ಟ್ಯಾಟೂಗಳು ಸಹ 2022 ರಲ್ಲಿ ಜನಪ್ರಿಯವಾಗಿ ಮುಂದುವರೆಯುತ್ತವೆ. ಇವುಗಳು ಸಣ್ಣ ಮತ್ತು ಉತ್ತಮವಾದ ಗೆರೆಗಳನ್ನು ಒಳಗೊಂಡಿರುತ್ತವೆ. ಆದ್ದರಿಂದ ಶಾಯಿ ಹಾಕಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವುದು ತುಂಬಾ ಸುಲಭವಾಗಿರುತ್ತದೆ. ಯಾವಾಗಲೂ ನಿಮಗೆ ಇಷ್ಟವಾಗುವ ಮತ್ತು ನಿಮ್ಮ ನಂಬಿಕೆಗಳಿಗೆ ಅನುಗುಣವಾಗಿ ಟ್ಯಾಟೂ ವಿನ್ಯಾಸವನ್ನು ಆರಿಸಿಕೊಳ್ಳಬೇಕು. ಡಾ. ವಿದುಷಿ ಜೈನ್, ವೈದ್ಯಕೀಯ ಮುಖ್ಯಸ್ಥೆ ಶಾಯಿಯನ್ನು ಹಾಕುವಾಗ ಯಾವ ರೀತಿ ಎಚ್ಚರಿಗೆ ವಹಿಸಬೇಕು ಎಂಬುದರ ಬಗ್ಗೆ ಹೇಳಿದ್ದಾರೆ.
ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಏನೇನು ಮಾಡಬೇಕು ?
ಟ್ಯಾಟೂ ಹಾಕಿಸಿಕೊಳ್ಳುವ ಹಿಂದಿನ ರಾತ್ರಿ ಕೆಫೀನ್ ಅಥವಾ ಆಲ್ಕೋಹಾಲ್ ಸೇವಿಸಬೇಡಿ. ಇದು ರಕ್ತವನ್ನು ದುರ್ಬಲಗೊಳಿಸುತ್ತದೆ. ಇದರಿಂದ ಟ್ಯಾಟೂ ಹಾಕುವಾಗ ರಕ್ತಸ್ರಾವ ಆಗುವ ಅಪಾಯ ಹೆಚ್ಚಿದೆ.
ಕನಿಷ್ಠ ಒಂದು ವಾರದವರೆಗೆ, ಸಾಕಷ್ಟು ನೀರು ಕುಡಿಯಿರಿ. ಪ್ರತಿದಿನ ಕನಿಷ್ಠ ಎರಡು ಲೀಟರ್ ನೀರು ಕುಡಿದರೇ ಒಳ್ಳೆಯದು. ಸಾಕಷ್ಟು ನೀರು ಕುಡಿಯುವುದರಿಂದ ನಮ್ಮ ಚರ್ಮವು ನಯವಾಗಿ ಮತ್ತು ಆರೋಗ್ಯಕರವಾಗಿರುತ್ತದೆ.
ಇದನ್ನೂ ಓದಿ: ಉತ್ತಮ ಕೈಬರಹವು ಮೆದುಳಿನ ಆರೋಗ್ಯ ವೃದ್ಧಿಸುತ್ತದೆ.. ಹೇಗೆ ಗೊತ್ತಾ?
ಅಂತಿಮವಾಗಿ ಟ್ಯಾಟೂ ಹಾಕಿಸಿಕೊಳ್ಳುವ ಮೊದಲು, ಟ್ಯಾಟೂ ಕಲಾವಿದ ಹೊಸ ಸೂಜಿಗಳನ್ನು ಬಳಸುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಹೊಸ ಸೂಚಿಯನ್ನು ಬಳಸದಿದ್ದರೇ, ನಿಮ್ಮ ದೇಹದೊಳಗೆ ವೈರಸ್ಗಳು ಹೋಗಬಹುದು.