ಕರ್ನಾಟಕ

karnataka

ETV Bharat / bharat

ವಾಹನಗಳಿಗೆ ಭಾರತೀಯ ಸಂಗೀತವಾದ್ಯಗಳ ಶಬ್ದ ಹಾರ್ನ್​ ಆಗಿ ಬಳಸಿಕೊಳ್ಳಲು ಶೀಘ್ರ ಕಾನೂನು: ಗಡ್ಕರಿ - ಹಾರ್ಮೋನಿಯಂ

ಬೆಳ್ಳಂಬೆಳಗ್ಗೆ ಆಕಾಶವಾಣಿಯಲ್ಲಿ ಬರುವ ಟ್ಯೂನ್ ಅನ್ನು ಸೈರನ್​ಗೆ ಬಳಸಿಕೊಳ್ಳಲಾಗುತ್ತದೆ. ಈ ಟ್ಯೂನ್ ಜನರಿಗೆ ಹಿತಕರವಾಗಿರುತ್ತದೆ ಎಂದು ನನಗೆ ಅನ್ನಿಸುತ್ತಿದೆ.- ಕೇಂದ್ರ ಸಚಿವ ಗಡ್ಕರಿ

Planning law to use sound of Indian musical instruments only for vehicle horns: Gadkari
ವಾಹನಗಳಿಗೆ ಭಾರತೀಯ ಸಂಗೀತವಾದ್ಯಗಳ ಶಬ್ದ ಹಾರ್ನ್​ ಆಗಿ ಬಳಸಿಕೊಳ್ಳಲು ಶೀಘ್ರ ಕಾನೂನು: ಗಡ್ಕರಿ

By

Published : Oct 5, 2021, 7:30 AM IST

Updated : Oct 5, 2021, 7:36 AM IST

ನಾಸಿಕ್(ಮಹಾರಾಷ್ಟ್ರ):ಈಗಾಗಲೇ ಸರ್ಕಾರ ವಾಹನಗಳ ಹಾರ್ನ್​ಗೆ ಸಂಗೀತ ವಾದ್ಯಗಳ ಶಬ್ದವನ್ನು ಅಳವಡಿಸಲು ನಿರ್ಧಾರ ತೆಗೆದುಕೊಂಡಿದೆ. ಇದಕ್ಕಾಗಿ ಕೇವಲ ಭಾರತೀಯ ಸಂಗೀತ ವಾದ್ಯಗಳ ಶಬ್ದಗಳನ್ನು ಮಾತ್ರ ಅಳವಡಿಸಿಕೊಳ್ಳಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ನಾಸಿಕ್​ನಲ್ಲಿ ನಡೆದ ಹೆದ್ದಾರಿ ಉದ್ಘಾಟನಾ ಸಮಾರಂಭವೊಂದರಲ್ಲಿ ಮಾತನಾಡಿದ ಗಡ್ಕರಿ, ಆ್ಯಂಬುಲೆನ್ಸ್ ಮತ್ತು ಪೊಲೀಸ್ ವಾಹನಗಳು ಬಳಸುವ ಸೈರನ್‌ಗಳ ಬಗ್ಗೆಯೂ ಅಧ್ಯಯನ ಮಾಡಲಾಗಿದೆ. ಈಗಿರುವ ಶಬ್ದಕ್ಕೆ ಬದಲಾಗಿ ಆಲ್ ಇಂಡಿಯಾ ರೇಡಿಯೋದಲ್ಲಿ ಬರುವ ಟ್ಯೂನ್ ಅನ್ನು ಬಳಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದರು.

ಪೊಲೀಸರು ಮತ್ತು ರಾಜಕೀಯ ವ್ಯಕ್ತಿಗಳು ಬಳಸುವ ಕಾರುಗಳ ಮೇಲೆ ಅಳವಡಿಸುವ ಕೆಂಪು ದೀಪವನ್ನು ಕೂಡಾ ತೆಗೆದುಹಾಕಲಾಗುತ್ತದೆ. ಇದರ ಜೊತೆಗೆ ಸೈರನ್​ಗಳನ್ನು ತೆಗೆದುಹಾಕುವ ಬಗ್ಗೆಯೂ ಅಧ್ಯಯನ ಮಾಡಲಾಗುತ್ತಿದೆ.

ಬೆಳ್ಳಂಬೆಳಗ್ಗೆ ಆಕಾಶವಾಣಿಯಲ್ಲಿ ಬರುವ ಟ್ಯೂನ್ ಅನ್ನು ಸೈರನ್​ಗೆ ಬಳಸಿಕೊಳ್ಳಲಾಗುತ್ತದೆ. ಈ ಟ್ಯೂನ್ ಜನರಿಗೆ ಕೇಳಲು ಹಿತಕರವಾಗಿರುತ್ತದೆ ಎಂದು ನನಗೆ ಅನ್ನಿಸುತ್ತಿದೆ. ಇದರಿಂದಾಗಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಬಳಸುವ ಕಿರಿಕಿರಿ ನೀಡುವ ಶಬ್ದದಿಂದ ಮುಕ್ತಿ ದೊರೆಯುತ್ತದೆ. ಇದರ ಜೊತೆಗೆ, ಹೆಚ್ಚು ಶಬ್ದ ಇರುವ ಕಾರಣದಿಂದ ಕಿವಿಗಳಿಗೂ ಅಪಾಯವಾಗುವುದರಿಂದ ಪಾರಾಗಬಹುದು ಎಂದು ಗಡ್ಕರಿ ಅಭಿಪ್ರಾಯಪಟ್ಟರು.

ಈ ಕುರಿತು ಕಾನೂನನ್ನು ಶೀಘ್ರ ತರಲಾಗುತ್ತದೆ. ಕೊಳಲು, ತಬಲಾ, ವಯೋಲಿನ್, ಹಾರ್ಮೋನಿಯಂ, ಹಾರ್ಮೋನಿಕಾ (mouth organ) ಮುಂತಾದ ಭಾರತೀಯ ಸಂಗೀತ ಸಾಧನಗಳನ್ನು ಮಾತ್ರ ಬಳಸಿಕೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ಅಪಘಾತಗಳಿಂದ ಜಿಡಿಪಿ ನಷ್ಟ

ಸುಮಾರು ಒಂದು ಲಕ್ಷ ಕೋಟಿ ಮೌಲ್ಯದ ನೂತನ ಮುಂಬೈ- ದೆಹಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಈ ಹೆದ್ದಾರಿ ಭಿವಂಡಿ ಮತ್ತು ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್ ಮೂಲಕ ಮುಂಬೈಗೆ ತಲುಪುತ್ತದೆ. ಬಾಂದ್ರಾ ಮತ್ತು ವರ್ಲಿ ಸೀ ಲಿಂಕ್​ಗಾಗಿ (Bandra-Worli Sea Link) ಸೇತುವೆ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗುತ್ತಿದೆ.

ಭಾರತದಲ್ಲಿ ಪ್ರತಿ ವರ್ಷ 5 ಲಕ್ಷ ಅಪಘಾತಗಳು ಜರುಗುತ್ತಿದ್ದು, 1.5 ಲಕ್ಷ ಜನ ಸಾಯುತ್ತಿದ್ದಾರೆ. ಲಕ್ಷಾಂತರ ಮಂದಿ ಗಾಯಗೊಳ್ಳುತ್ತಿದ್ದಾರೆ. ಅಪಘಾತಗಳಿಂದ ನಮ್ಮ ಜಿಡಿಪಿಯ ಶೇಕಡಾ 3ರಷ್ಟು ನಷ್ಟವಾಗುತ್ತಿದೆ ಎಂದು ಕೇಂದ್ರ ಸಚಿವ ಗಡ್ಕರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಪ್ರಪಂಚದಾದ್ಯಂತ ವಾಟ್ಸ್​ಆ್ಯಪ್​​, ಇನ್​​ಸ್ಟಾಗ್ರಾಂ, ಫೇಸ್​ಬುಕ್​ ಡೌನ್​.. ಬಳಕೆದಾರರ ಪರದಾಟ

Last Updated : Oct 5, 2021, 7:36 AM IST

ABOUT THE AUTHOR

...view details