ನವದೆಹಲಿ :ಜೀವಿತಾವಧಿಯಲ್ಲಿ ಒಮ್ಮೆ ಉಂಟಾಗುವ ಸಾಂಕ್ರಾಮಿಕ ಬಹುದೊಡ್ಡ ಪರಿಣಾಮ ಉಂಟುಮಾಡಿದೆ. ಕೊರೊನಾ ನಂತರ ಜಗತ್ತು ಇದೇ ರೀತಿ ಇರುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.
ಬುದ್ದ ಪೂರ್ಣಿಮಾ ಕುರಿತ ವರ್ಚುವಲ್ ವೆಸಾಕ್ ಗ್ಲೋಬಲ್ ಸೆಲೆಬ್ರೇಷನ್ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು.
ಸಾಂಕ್ರಾಮಿಕ ರೋಗದ ವಿರುದ್ಧ ಮಾನವೀಯತೆಯ ಹೋರಾಟವನ್ನು ನಡೆಸುತ್ತಿರುವ ಎಲ್ಲಾ ಮುಂಚೂಣಿ ಕಾರ್ಮಿಕರಿಗೆ ಅವರು ಕಳೆದ ವರ್ಷದ ವೆಸಾಕ್ ದಿನದ ಕಾರ್ಯಕ್ರಮವನ್ನು ಅರ್ಪಿಸಿದರು.