ಚೆನ್ನೈ:ತಮಿಳುನಾಡಿನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದ ಎಲ್ಟಿಟಿಇ ಮಾದರಿಯಲ್ಲಿಯೇ ಸಂಘಟನೆಯೊಂದನ್ನು ರೂಪಿಸುತ್ತಿದ್ದ ಮಾಸ್ಟರ್ಮೈಂಡ್ಗಳನ್ನು ರಾಷ್ಟ್ರೀಯ ಗುಪ್ತಚರ ಸಂಸ್ಥೆ(ಎನ್ಐಎ) ಬಂಧಿಸಿದೆ. ಅಲ್ಲದೇ, ಬಂದೂಕು, ಗುಂಡುಗಳನ್ನು ತಯಾರಿಸುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿ ಜಪ್ತಿ ಮಾಡಿದೆ.
ಪದವೀಧರನಾದ ಸೇಲಂನ ನವೀನ್ ಚಕ್ರವರ್ತಿ, ಈತನ ಸ್ನೇಹಿತ ಸೆವ್ವಾಯಿಪೇಟೆಯ ಸಂಜಯ್ ಪ್ರಕಾಶ್ ಬಂಧಿತರು. ಬಂಧಿತ ಆರೋಪಿಗಳು ಸೇಲಂನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಅಲ್ಲಿ ಅವರು ಯೂಟ್ಯೂಬ್ ವೀಕ್ಷಿಸಿ ಬಂದೂಕುಗಳನ್ನು ತಯಾರಿಸುತ್ತಿದ್ದರು. ಮನೆಯಲ್ಲಿ ಬಂದೂಕು ತಯಾರಿಕೆಗೆ ಬೇಕಾದ ಎಲ್ಲ ಸ್ಫೋಟಕ ಪರಿಕರಗಳನ್ನು ಇಟ್ಟುಕೊಂಡಿದ್ದರು.
ವಾಹನ ತಪಾಸಣೆ ನಡೆಸುತ್ತಿದ್ದಾಗ ಅನುಮಾನಾಸ್ಪದ ಕಂಡುಬಂದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದ ವಿಚಾರಣೆ ನಡೆಸಿದ್ದಾರೆ. ಆಗ ಅವರು ನೀಡಿದ ಮಾಹಿತಿ ಆಧಾರದ ಮೇಲೆ ಮನೆಯ ಮೇಲೆ ದಾಳಿ ಮಾಡಿದಾಗ ಪಿಸ್ತೂಲ್‌ಗಳು, ಬಂದೂಕು ತಯಾರಿಸುವ ಸ್ಫೋಟಕ ಉಪಕರಣಗಳು, ಚಾಕುಗಳು ಪತ್ತೆಯಾಗಿವೆ.