ಲಡಾಖ್:ಲೈನ್ ಆಫ್ ಕಂಟ್ರೋಲ್ನ ಭಾರತೀಯ ಗಡಿ ಪ್ರದೇಶ ಲಡಾಕ್ನಲ್ಲಿ ಚೀನಾ ಯೋಧನನ್ನು ಭಾರತೀಯ ಸೇನೆ ವಶಕ್ಕೆ ಪಡೆದುಕೊಂಡಿದ್ದು, ಶಿಷ್ಟಾಚಾರ ಮುಗಿದ ಬಳಿಕ ಮರಳಿ ಹಿಂತಿರುಗಿಸುವ ಸಾಧ್ಯತೆ ಇದೆ.
ಶುಕ್ರವಾರ ಬೆಳಗ್ಗೆ ಪೂರ್ವ ಲಡಾಖ್ನ ಚುಶುಲ್ ಸೆಕ್ಟರ್ನ ಗುರುಂಗ್ ಬೆಟ್ಟದ ಬಳಿ ಚೀನಾ ಯೋಧನ ಬಂಧನ ಮಾಡಲಾಗಿದೆ. ದಾರಿ ತಪ್ಪಿ ಆತ ಭಾರತದ ಗಡಿಯೊಳಗೆ ಬಂದಿರಬಹುದು ಎಂದು ಹೇಳಲಾಗುತ್ತಿದೆ. ಇಂದು ಅಥವಾ ನಾಳೆ ಆತನನ್ನು ಮರಳಿ ಹಿಂತಿರುಗಿಸುವ ಸಾಧ್ಯತೆ ಇದೆ.