ಪಠಾಣ್ ಕೋಟ್: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ರಂಜಿತ್ ಸಾಗರ್ ಅಣೆಕಟ್ಟು ಬಳಿ ಭಾರತೀಯ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, ಪೈಲಟ್ ಮತ್ತು ಸಹ ಪೈಲಟ್ ಕುರಿತು ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.
ಪಠಾಣ್ಕೋಟ್ನಿಂದ ವೆಪನ್ ಸಿಸ್ಟಮ್ ಇಂಟಿಗ್ರೇಟೆಡ್ ಹೆಲಿಕಾಪ್ಟರ್ ನಿನ್ನೆ ಬೆಳಗ್ಗೆ 10:20 ಕ್ಕೆ ಹೊರಟಿತ್ತು. ಹೆಲಿಕಾಪ್ಟರ್ ರಂಜಿತ್ ಸಾಗರ್ ಅಣೆಕಟ್ಟು ಪ್ರದೇಶದ ಕೆಳಗೆ ಹಾರಾಟ ನಡೆಸುತ್ತಿದ್ದಾಗ ಅಪಘಾತಕ್ಕೀಡಾಗಿದೆ. ಈ ವೇಳೆ ಇಬ್ಬರು ಪೈಲಟ್ಗಳು ಸುರಕ್ಷಿತವಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿದ್ದವು.