ಕರ್ನಾಟಕ

karnataka

ETV Bharat / bharat

ಪ್ರತಿಯೊಬ್ಬ ನಾಗರಿಕನಿಗೆ ಉಚಿತ ಲಸಿಕೆ ನೀಡಲು ಏಕರೂಪದ ಪ್ಯಾನ್ ಇಂಡಿಯಾ ನೀತಿ ಜಾರಿ ಕೋರಿ ಸುಪ್ರೀಂಗೆ ಪಿಐಎಲ್​ ಸಲ್ಲಿಕೆ - ಪ್ರತಿಯೊಬ್ಬ ನಾಗರಿಕನಿಗೆ ಉಚಿತ ಲಸಿಕೆ

ಈ ದೇಶದ ಜನರು ಲಸಿಕೆಯ ಮೇಲೆ ಮಾತ್ರ ಭರವಸೆ ಇಡಬಹುದು. ಸರ್ಕಾರವು ನಿಗದಿಪಡಿಸಿದ ವ್ಯಾಕ್ಸಿನ್​ ಬೆಲೆಯನ್ನು ಬಹುಪಾಲು ಜನರಿಗೆ ಭರಿಸಲಾಗುವುದಿಲ್ಲ ಮತ್ತು ಔಷಧಿ ವೆಚ್ಚವನ್ನು ಭರಿಸಲಾಗುವುದಿಲ್ಲ ಎಂದು ಮನವಿಯಲ್ಲಿ ಸೇರಿಸಲಾಗಿದೆ..

highcourt
highcourt

By

Published : May 12, 2021, 3:21 PM IST

ನವದೆಹಲಿ : ಪ್ರತಿಯೊಬ್ಬ ಭಾರತೀಯ ನಾಗರಿಕರಿಗೂ ಉಚಿತವಾಗಿ ಕೋವಿಡ್ -19 ಲಸಿಕೆ ನೀಡಲು ಏಕರೂಪದ ಪ್ಯಾನ್ ಇಂಡಿಯಾ ನೀತಿಯನ್ನು ರೂಪಿಸುವಂತೆ ಭಾರತದ ಒಕ್ಕೂಟಕ್ಕೆ ನಿರ್ದೇಶನ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವಕೀಲ ಎ ಸೆಲ್ವಿನ್ ರಾಜಾ ಅವರು ಸಲ್ಲಿಸಿದ ಪಿಐಎಲ್​​ನಲ್ಲಿ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಉಚಿತ ಮತ್ತು ಏಕರೂಪದ ವ್ಯಾಕ್ಸಿನೇಷನ್ ನೀಡಲು ಸ್ವತಂತ್ರ ಸಂಸ್ಥೆ ರಚಿಸುವಂತೆ ಸರ್ವೋಚ್ಛ ನ್ಯಾಯಾಲಯವನ್ನು ಕೋರಿದ್ದಾರೆ.

ಅರ್ಜಿಯಲ್ಲಿ 21ನೇ ವಿಧಿ ಪ್ರಕಾರ, ಭಾರತದ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ಉಚಿತವಾಗಿ ಪಡೆಯುವ ಅಮೂಲ್ಯ ಹಕ್ಕಿದೆ ಎಂದು ಕೋರ್ಟ್​ ಹೇಳಿದೆ.

ಕೋವಿಡ್​ ಸಾಂಕ್ರಾಮಿಕ ರೋಗವು ಶೀಘ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಸಕಾಲಿಕ ಚಿಕಿತ್ಸೆಯನ್ನು ಪಡೆಯದೆ ಸಾಯುತ್ತಿದ್ದಾರೆ ಮತ್ತು ಸ್ಮಶಾನಗಳಲ್ಲಿ ಹಗಲು-ರಾತ್ರಿ ಎನ್ನದೇ ಹೆಣಗಳನ್ನು ಸುಡಲಾಗುತ್ತಿದೆ. ಸತ್ತವರ ಅಂತ್ಯಕ್ರಿಯೆ ನಡೆಸಲು ಗಂಟೆಗಟ್ಟಲೆ ಕಾಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ದೇಶದ ಜನರು ಲಸಿಕೆಯ ಮೇಲೆ ಮಾತ್ರ ಭರವಸೆ ಇಡಬಹುದು. ಸರ್ಕಾರವು ನಿಗದಿಪಡಿಸಿದ ವ್ಯಾಕ್ಸಿನ್​ ಬೆಲೆಯನ್ನು ಬಹುಪಾಲು ಜನರಿಗೆ ಭರಿಸಲಾಗುವುದಿಲ್ಲ ಮತ್ತು ಔಷಧಿ ವೆಚ್ಚವನ್ನು ಭರಿಸಲಾಗುವುದಿಲ್ಲ ಎಂದು ಮನವಿಯಲ್ಲಿ ಸೇರಿಸಲಾಗಿದೆ.

ABOUT THE AUTHOR

...view details