ನವದೆಹಲಿ:ಎಲ್ಎಸಿ (ವಾಸ್ತವಿಕ ಗಡಿ ನಿಯಂತ್ರಣ ರೇಖೆ) ಕುರಿತಾದ ಕೇಂದ್ರ ಸಚಿವ ಮತ್ತು ನಿವೃತ್ತ ಸೇನಾ ಮುಖ್ಯಸ್ಥ ವಿ.ಕೆ ಸಿಂಗ್ ಹೇಳಿಕೆ ವಿರುದ್ಧ ಪಿಐಎಲ್ ದಾಖಲಾಗಿದೆ. ಜ. ವಿ.ಕೆ. ಸಿಂಗ್ ಅವರು ಭಾರತ - ಚೀನಾ ಗಡಿ ಸಂಘರ್ಷದ ಕುರಿತಾಗಿ ಭಾರತ ವಿರೋಧಿ ಹೇಳಿಕೆ ನೀಡಿದ್ದು, ಕರ್ತವ್ಯ ಚ್ಯುತಿ ಎಸಗಿದ್ದಾರೆ ಎಂದು ಪಿಐಎಲ್ನಲ್ಲಿ ದಾಖಲಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರನ್ ರಾಮಸ್ವಾಮಿ ಎಂಬುವರು ವಿ.ಕೆ. ಸಿಂಗ್ ಅವರ ವಿವಾದಾತ್ಮಕ ಹೇಳಿಕೆಗಳ ಪಟ್ಟಿ ಮಾಡಿದ್ದು, ಈ ಬಗ್ಗೆ ಪಿಐಎಲ್ ಸಲ್ಲಿಸಿದ್ದಾರೆ.
". . . .ನಾವು ಅದೆಷ್ಟು ಬಾರಿ ಚೀನಾದೊಳಗೆ ನುಗ್ಗಿದ್ದೆವು ಎಂಬುದು ನಿಮಗಾರಿಗೂ ತಿಳಿಯದು. ಅದನ್ನು ನಾವು ಹೇಳಿಕೊಳ್ಳಲ್ಲ. ಚೀನಾ ಮಾಧ್ಯಮವೂ ಅದರ ಬಗ್ಗೆ ವರದಿ ಮಾಡಲ್ಲ.. ಚೀನಾ 10 ಬಾರಿ ಭಾರತದೊಳಗೆ ಅತಿಕ್ರಮಣ ಮಾಡಿದೆ ಎಂದಾದರೆ ನಾವು 50 ಬಾರಿ ಹಾಗೆ ಮಾಡಿದ್ದೇವೆ.. ಇದು ಗೊತ್ತಿರಲಿ.." ಎಂದು ವಿ.ಕೆ. ಸಿಂಗ್ ಫೆಬ್ರವರಿ 7, 2021 ರಂದು ತಮಿಳುನಾಡಿನ ಮದುರೈನಲ್ಲಿ ಹೇಳಿದ್ದರು.
ಸಿಂಗ್ ಅವರ ಈ ಹೇಳಿಕೆಯು ಚೀನಾ ವಿಷಯದಲ್ಲಿ ಭಾರತ ಸರ್ಕಾರದ ನಿಲುವಿಗೆ ವಿರುದ್ಧವಾಗಿದೆ ಹಾಗೂ ಸರ್ಕಾರದ ವಿರುದ್ಧ ಜನರಲ್ಲಿ ದ್ವೇಷ ಹುಟ್ಟಿಸುವಂಥದ್ದಾಗಿದೆ. ಇಂಥ ಹೇಳಿಕೆಯ ಮೂಲಕ ಅವರು ಕರ್ತವ್ಯ ಚ್ಯುತಿ ಎಸಗಿದ್ದಾರೆ. ಹೀಗಾಗಿ ಅವರ ವಿರುದ್ಧ ಕರ್ತವ್ಯ ಚ್ಯುತಿಯ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕೆಂದು ಪಿಐಎಲ್ನಲ್ಲಿ ಮನವಿ ಮಾಡಲಾಗಿದೆ.
ಇದನ್ನೂ ಓದಿ: ನಟ ಟಿನು ವರ್ಮಾ ಮೇಲೆ ಹಲ್ಲೆ, ದರೋಡೆ: ಪ್ರಕರಣ ದಾಖ
ಲು