ಮಾಲ್ಡಾ (ಪಶ್ಚಿಮಬಂಗಾಳ) :ಸರ್ಕಾರಿ ಕಚೇರಿಯೊಳಗೆ ಕೈಯಲ್ಲಿ ಪಿಸ್ತೂಲ್ ಹಿಡಿದುಕೊಳ್ಳುವ ಮೂಲಕ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಪೋಸ್ ಕೊಟ್ಟಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದಕ್ಕೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಪಶ್ಚಿಮ ಬಂಗಾಳದ ಮಾಲ್ಡಾ ಪಂಚಾಯತ್ ಸಮಿತಿ ಅಧ್ಯಕ್ಷೆ ಮತ್ತು ಅಲ್ಲಿನ ಟಿಎಂಸಿ ಮಹಿಳಾ ಮಂಡಲದ ಹಿರಿಯ ಮುಖಂಡೆ ಮೃಣಾಲಿನ್ ಮಂಡಲ್ ಈ ರೀತಿಯಾಗಿ ನಡೆದುಕೊಂಡಿದ್ದಾರೆ. ಅಲ್ಲಿನ ಬಿಡಿಒ ಕಚೇರಿಯಲ್ಲಿ ಕುಳಿತಿದ್ದಾಗ ಈ ರೀತಿಯಾಗಿ ನಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ. ಇದರ ಫೋಟೋ ವೈರಲ್ ಆಗುತ್ತಿದ್ದಂತೆ ತೃಣಮೂಲ ಕಾಂಗ್ರೆಸ್ ಹಿಂಸಾಚಾರ ಸಂಸ್ಕೃತಿ ಪ್ರೋತ್ಸಾಹಿಸುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಜೊತೆಗೆ ಪೊಲೀಸ್ ತನಿಖೆ ನಡೆದರೆ ಕೇವಲ ಪಿಸ್ತೂಲ್ ಮಾತ್ರವಲ್ಲ, ಬಾಂಬ್, ಎಕೆ-47 ನಂತಹ ಆಯುದಗಳು ಟಿಎಂಸಿ ನಾಯಕಿ ಮನೆಯಲ್ಲಿ ಪತ್ತೆಯಾಗುತ್ತವೆ ಎಂದಿದೆ.