ನವದೆಹಲಿ:ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ ಆಗಿರುವ ಭಾರತೀಯ ಮೂಲದ ಸುಂದರ್ ಪಿಚೈ ಅವರು ಕೊರೊನಾ ನಿಯಂತ್ರಣ ಸೇರಿದಂತೆ ನಾನಾ ಸಮಾಜ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಡೇಟಾ ಅನಾಲಿಟಿಕ್ಸ್, ಐಟಿ, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಕೌಶಲ್ಯಾಧರಿತ ಉದ್ಯೋಗಿಗಳ ಸೃಷ್ಟಿಗೆ 100 ಮಿಲಿಯನ್ ಡಾಲರ್ ನಿಧಿ ಘೋಷಿಸಿದ್ದಾರೆ.
ವಿದ್ಯಾರ್ಥಿಗಳು ಈ ನಿಧಿಯನ್ನು ಸ್ಕಾಲರ್ಶಿಪ್ ಮಾದರಿಯಲ್ಲಿ ಪಡೆದುಕೊಳ್ಳುತ್ತಾರೆ. ಇಲ್ಲಿಯವರೆಗೂ ಅಮೆರಿಕದ 70 ಸಾವಿರ ವಿದ್ಯಾರ್ಥಿಗಳು ಗೂಗಲ್ನ ವೃತ್ತಿಜೀವನದ ಪ್ರಮಾಣಪತ್ರಗಳನ್ನು ಪಡೆದುಕೊಂಡಿದ್ದಾರೆ. ಆರ್ಥಿಕ ಅಭಿವೃದ್ಧಿಗಾಗಿ ಅಮೆರಿಕಾದ ಸಹಾಯಕ ವಾಣಿಜ್ಯ ಕಾರ್ಯದರ್ಶಿ, ಸಾಮಾಜಿಕ ಹಣಕಾಸು, ಮೆರಿಟ್ ಅಮೆರಿಕ ಮತ್ತು ಇಯರ್ ಅಪ್‌ನ ಸಿಇಒಗಳ ಜೊತೆ ನಡೆದ ಕಾರ್ಯಕ್ರಮದಲ್ಲಿ ಸುಂದರ್ ಪಿಚೈ ಅವರು ಈ ನಿಧಿಯನ್ನು ಘೋಷಿಸಿದ್ದಾರೆ.