ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ 33 ಯಂಗ್ ಪ್ರೊಫೆಷನಲ್ಸ್ ಹುದ್ದೆಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋದ ವಿವಿಧ ಪ್ರಾದೇಶಿಕ ಕಚೇರಿಗೆ ಈ ಹುದ್ದೆಗಳ ನೇಮಕಾತಿ ನಡೆಯಲಿದೆ. ಒಂದು ವರ್ಷದ ಒಪ್ಪಂದದ ಮೇರೆಗೆ ಕೇಂದ್ರ ಸರ್ಕಾರದಿಂದ ನೇಮಕಾತಿ ನಡೆಸುತ್ತದೆ. ಪತ್ರಿಕೋದ್ಯಮದಲ್ಲಿ ಪದವಿ ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರು ಸೇರಿದಂತೆ ಹಲವು ರಾಜ್ಯದಲ್ಲಿ ಭರ್ತಿ ಪ್ರಕ್ರಿಯೆ ನಡೆಯಲಿದೆ.
ಹುದ್ದೆಗಳ ವಿವರ: ಬೆಂಗಳೂರು 2, ಶ್ರೀನಗರದಲ್ಲಿ 2, ಚಂಡೀಗಢದಲ್ಲಿ 2, ಕೋಲ್ಕತ್ತಾ 2, ಮುಂಬೈ 2, ಗುವಾಹಟಿ 2, ಅಹಮದಾಬಾದ್ 2, ಚೆನ್ನೈ 2, ಭುವನೇಶ್ವರ್ 2, ತಿರುವನಂತಪುರಂ 2, ಹೈದರಾಬಾದ್ 2, ವಿಜಯವಾಡ 1, ಲಕ್ನೋ 2, ಪಾಟ್ನಾ 2, ರಾಂಚಿ 1, ರಾಯ್ಪುರ್ 1. ಭೋಪಾಲ್ನಲ್ಲಿ 2 ಹುದ್ದೆಗಳಿವೆ.
ಅಭ್ಯರ್ಥಿಗಳು ಇಂಗ್ಲಿಷ್ ಜೊತೆಗೆ ರಾಜ್ಯದ ಸ್ಥಳೀಯ ಭಾಷೆಗಳ ಮೇಲೆ ಹಿಡಿತ ಹೊಂದಿರಬೇಕಿದೆ. ಒಂದು ವರ್ಷದ ಗುತ್ತಿಗೆ ಆಧಾರಿತ ಹುದ್ದೆ ಇದಾಗಿದ್ದು, ಅಭ್ಯರ್ಥಿಗಳ ಕಾರ್ಯ ಕ್ಷಮತೆ ಆಧಾರದ ಮೇಲೆ ಮೂರು ವರ್ಷಗಳ ಕಾಲ ವಿಸ್ತರಣೆ ಮಾಡಲಾಗುವುದು.
ವಿದ್ಯಾರ್ಹತೆ:ಸ್ನಾತಕೋತ್ತರ ಪದವಿ, ಜರ್ನಲಿಸಂನಲ್ಲಿ ಡಿಪ್ಲೊಮಾ, ಸಮೂಹ ಸಂವಹನ ಅಥವಾ ವಿಷುಯಲ್ ಕಮ್ಯೂನಿಕೇಷನ್, ಮಾಹಿತಿ ಕಲೆಯಲ್ಲಿ ಸ್ನಾತಕೋತ್ತರ ಪದವಿ.
ಅನುಭವ:ಈಗಾಗಲೇ ಪತ್ರಿಕೋದ್ಯಮ ಕ್ಷೇತ್ರ ಅಥವಾ ಮಾರ್ಕೆಟಿಂಗ್, ಅನಿಮೇಷನ್, ಎಡಿಟಿಂಗ್, ಅಥವಾ ಬುಕ್ ಪಬ್ಲಿಷಿಂಗ್ನಲ್ಲಿ ಎರಡು ವರ್ಷ ಕಾರ್ಯನಿರ್ವಹಿಸಿದ ಹುದ್ದೆ ಅನುಭವ ಹೊಂದಿರಬೇಕು.