ಕರ್ನಾಟಕ

karnataka

ETV Bharat / bharat

ನದಿಗಳಲ್ಲಿ ತೇಲಿಬರುತ್ತಿವೆ ಶವಗಳು: ನೀರಿನಿಂದಲೂ ಕೊರೊನಾ ಹರಡಬಹುದು ಎಂದ ವೈದ್ಯರು! - ತೇಲಿಬರುತ್ತಿವೆ ಶವಗಳು

ಮೃತ ದೇಹವನ್ನು ವಿಲೇವಾರಿ ಮಾಡಲು ಪ್ರೋಟೋಕಾಲ್ ಇದೆ. ಶವಗಳನ್ನು ನದಿಯಲ್ಲಿ ಬಿಸಾಡುವಂತಿಲ್ಲ. ನದಿಯಲ್ಲಿ ತೇಲಿಬರುವ ಶವಗಳು ಕೊರೊನಾ ಸೋಂಕಿಗೆ ಒಳಗಾಗಿದ್ದರೆ, ನೀರಿನ ಮೂಲಕ ವೈರಸ್ ಹರಡುವ ಸಾಧ್ಯತೆ ಇದೆ. ಈ ಬಗ್ಗೆ ಅನೇಕ ಅಧ್ಯಯನಗಳು ಸಹ ನಡೆದಿವೆ ಎಂದು ಎಸ್‌ಜಿಪಿಜಿಐನ ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಉಜ್ವಲ್​ ಘೋಶಾಲ್ ತಿಳಿಸಿದ್ದಾರೆ.

ಶವ
ಶವ

By

Published : May 13, 2021, 9:48 PM IST

ಲಖನೌ: ಇತ್ತೀಚೆಗೆ ಯುಪಿ - ಬಿಹಾರದಲ್ಲಿ ಶವಗಳು ನದಿಯಲ್ಲಿ ತೇಲಿ ಬರುತ್ತಿದ್ದು, ಕೊರೊನಾದಿಂದ ಸತ್ತವರ ಶವಗಳಾದಲ್ಲಿ ನೀರಿನ ಮೂಲಕ ಸೋಂಕು ಹರಡುವ ಸಾಧ್ಯತೆ ಇದೆ ಎಂದು ವೈದ್ಯಕೀಯ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಮೃತ ದೇಹವನ್ನು ವಿಲೇವಾರಿ ಮಾಡಲು ಪ್ರೋಟೋಕಾಲ್ ಇದೆ. ಶವಗಳನ್ನು ನದಿಯಲ್ಲಿ ಬಿಸಾಡುವಂತಿಲ್ಲ. ನದಿಯಲ್ಲಿ ತೇಲಿಬರುವ ಶವಗಳು ಕೊರೊನಾ ಸೋಂಕಿಗೆ ಒಳಗಾಗಿದ್ದರೆ, ನೀರಿನ ಮೂಲಕ ವೈರಸ್ ಹರಡುವ ಸಾಧ್ಯತೆ ಇದೆ. ಈ ಬಗ್ಗೆ ಅನೇಕ ಅಧ್ಯಯನಗಳು ಸಹ ನಡೆದಿವೆ ಎಂದು ಎಸ್‌ಜಿಪಿಜಿಐನ ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಉಜ್ವಲ್​ ಘೋಶಾಲ್ ತಿಳಿಸಿದ್ದಾರೆ.

ನೆದರ್ಲೆಂಡ್ಸ್‌ನ ವಿಜ್ಞಾನಿಗಳ ಸಂಶೋಧನೆಯು ಆನ್‌ಲೈನ್ ಜರ್ನಲ್ ಕೆಡಬ್ಲ್ಯೂಆರ್ ನ 24 ಮಾರ್ಚ್ 2020ರ ಸಂಚಿಕೆಯಲ್ಲಿ ಈ ಕುರಿತು ಪ್ರಕಟವಾಗಿತ್ತು. ಅದರಲ್ಲಿ ಕೊರೊನಾ ವೈರಸ್‌ನ ಮೂರು ಸಕ್ರಿಯ ಜೀನ್ಸ್ ನೀರಿನ ಸಂಸ್ಕರಣಾ ಘಟಕದಲ್ಲಿ ಕಂಡು ಬಂದಿದೆ ಎಂದು ಹೇಳಲಾಗಿದೆ. ಇನ್ನು ಯುಕೆಯ ಪರಿಸರ ವಿಜ್ಞಾನ ಮತ್ತು ಜಲವಿಜ್ಞಾನ ಕೇಂದ್ರದ ಪ್ರಕಾರ, ಕೊರೊನಾ ವೈರಸ್ ಕೆಲ ಸಮಯದವರೆಗೆ ಮಲ ಅಥವಾ ಕೊಳಕು ನೀರಿನಲ್ಲಿ ಸಕ್ರಿಯವಾಗಿರುತ್ತದೆ. ಆದರೆ, ನೀರಿನಲ್ಲಿ ಎಷ್ಟು ದಿನ ಉಳಿದುಕೊಂಡಿರುತ್ತದೆ ಎಂಬುದನ್ನು ನಿಖರವಾಗಿ ಹೇಳಲಾಗುವುದಿಲ್ಲ ಎಂದು ತಿಳಿಸಿದೆ.

ABOUT THE AUTHOR

...view details