ಛತ್ತೀಸ್ಗಢ: ಕೊರೊನಾದಿಂದ ಸಾವು-ನೋವು ನೋಡಿ ಬೇಸರಗೊಂಡಿರುವ ನರ್ಸ್‌ವೊಬ್ಬರು ಹತಾಶೆಯಿಂದ ಗೋಡೆಗೆ ಒರಗಿ ಕುತಿರುವ ಫೋಟೋ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ.
ಪಂಕಜೂರ್ ಆಸ್ಪತ್ರೆಯ ನರ್ಸ್ ಲಿಲಸಾನಿ ಕೊಡಾಪಿ ನೆಲದ ಮೇಲೆ ಕುಳಿತು ಕಾಲುಗಳನ್ನು ಚಾಚಿದ್ದಾರೆ. ಪಿಪಿಇ ಕಿಟ್‌ನಲ್ಲಿ ಧರಿಸಿರುವ ನರ್ಸ್ ಹಲವಾರು ಗಂಟೆ ಕೆಲಸ ಮಾಡಿ ಕೆಲ ಸಮಯ ವಿಶ್ರಾಂತಿ ಪಡೆಯುತ್ತಿದ್ದರು ಎನ್ನಲಾಗಿದೆ.