ಪೌರಿ(ಉತ್ತರಾಖಂಡ):ಸುಮಾರು 28 ವರ್ಷಗಳ ನಂತರ ಹುಟ್ಟೂರಿಗೆ ಪ್ರವಾಸ ಕೈಗೊಂಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾಯಿಯ ಆಶೀರ್ವಾದ ಪಡೆದುಕೊಂಡಿದ್ದಾರೆ. ತಮ್ಮ ತಾಯಿ ಸಾವಿತ್ರಿ ದೇವಿ (85) ಅವರನ್ನ ಭೇಟಿ ಮಾಡಿ, ಕಾಲಿಗೆ ಸಮಸ್ಕರಿಸುತ್ತಿರುವ ಫೋಟೋವೊಂದನ್ನ ತಮ್ಮ ಟ್ವೀಟರ್‌ನಲ್ಲಿ ಯೋಗಿ ಪೋಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಜೊತೆಗೆ ಇವರ ಹೋಲಿಕೆ ಮಾಡಲಾಗ್ತಿದೆ.
ಈ ಹಿಂದೆ ಗುಜರಾತ್ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದ ಸಂದರ್ಭದಲ್ಲಿ ತಾಯಿ ಹೀರಾಬೆನ್ ಅವರ ಪಾದ ಸ್ಪರ್ಶಿಸಿ, ಆಶೀರ್ವಾದ ಪಡೆದುಕೊಂಡಿದ್ದರು. ಇದೀಗ ಯೋಗಿ ಆದಿತ್ಯನಾಥ್ ಕೂಡ ಅದೇ ರೀತಿಯಲ್ಲಿ ನಡೆದುಕೊಂಡಿದ್ದಾರೆ.
ಖಾಸಗಿ ಕಾರ್ಯಕ್ರಮದ ನಿಮಿತ್ತ ಬಹಳ ವರ್ಷಗಳ ನಂತರ ತಮ್ಮ ಹುಟ್ಟೂರಾದ ಉತ್ತರಾಖಂಡದ ಪೌರಿಗೆ ತೆರಳಿರುವ ಯೋಗಿ, ತಮ್ಮ ತಾಯಿ ಸಾವಿತ್ರಾ ದೇವಿ(85) ಅವರನ್ನು ಭೇಟಿ ಮಾಡಿ ಅವರ ಜೊತೆ ಕೆಲ ಸಮಯ ಕಳೆದರು. ತಾಯಿಗೆ ನಮಸ್ಕಾರ ಮಾಡುತ್ತಿರುವ ಫೋಟೋವನ್ನು ಟ್ವೀಟರ್‌ನಲ್ಲಿ ಸ್ವತಃ ಯೋಗಿ ಅವರು ಹಂಚಿಕೊಂಡಿದ್ದಾರೆ. ಫೋಟೋಗೆ “ಮಾ” ಎಂದು ಶೀರ್ಷಿಕೆ ನೀಡಿದ್ದಾರೆ.
ಹುಟ್ಟೂರಿಗೆ ಭೇಟಿ ನೀಡಿ ತಾಯಿ ಆಶೀರ್ವಾದ ಪಡೆದ ಯೋಗಿ ಇದನ್ನೂ ಓದಿ:ಮಕ್ಕಳ ಎದುರೇ ಮಹಿಳೆ ಮೇಲೆ ಅತ್ಯಾಚಾರ.. ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮಗನಿಂದ ಕೃತ್ಯ!
ಮೋದಿ ಜೊತೆ ಹೋಲಿಕೆ:ಈ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಹೋಲಿಕೆ ಮಾಡಲಾಗ್ತಿದೆ. ಓರ್ವ ಪ್ರಧಾನಿ ಹಾಗೂ ಮತ್ತೋರ್ವರು ಅತಿ ದೊಡ್ಡ ರಾಜ್ಯದ ಮುಖ್ಯಮಂತ್ರಿ ತಮ್ಮ ತಾಯಿಯನ್ನ ಭೇಟಿಯಾಗಿ ಆಶೀರ್ವಾದ ಪಡೆದುಕೊಳ್ಳುವುದು ಅವರಿಗೆ ಮತ್ತಷ್ಟು ಶಕ್ತಿ ತುಂಬುತ್ತದೆ ಎಂದು ಅನೇಕರು ಮಾತನಾಡಿಕೊಳ್ತಿದ್ದಾರೆ.
ಯೋಗಿ ಆದಿತ್ಯನಾಥ್ ಇಂದು ಬೆಳಗ್ಗೆ ಗ್ರಾಮದಲ್ಲಿ ವಾಯು ವಿಹಾರ ಮಾಡಿದ್ದು, ಈ ವೇಳೆ ಮಕ್ಕಳೊಂದಿಗೆ ಕೆಲ ಸಮಯ ಕಳೆದಿದ್ದಾರೆ. ಈ ಸಂದರ್ಭ ಅನೇಕರು ಯೋಗಿ ಜೊತೆ ಸೆಲ್ಫಿ ಸಹ ತೆಗೆದುಕೊಂಡರು. ಸೋದರಳಿಯನ ಕೇಶ ಮಂಡನ ಸಮಾರಂಭದಲ್ಲಿ ಭಾಗಿಯಾಗಲು ಯೋಗಿ ಹುಟ್ಟೂರಿಗೆ ತೆರಳಿದ್ದು, ಪೌರಿ ಜಿಲ್ಲೆಯ ಬಿತ್ಯಾನಿಯಲ್ಲಿರುವ ಗುರು ಗೋರಖಾನಾಥ್ ಮಹಾವಿದ್ಯಾಲಯದಲ್ಲಿ ತಮ್ಮ ಅಧ್ಯಾತ್ಮಿಕ ಗುರು ಮಹಂತ್ ಅವೈದ್ಯನಾಥ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಪೌರಿಯ ಪಂಚೂರ್ ಗ್ರಾಮದಲ್ಲಿ ಜನಿಸಿದ ಯೋಗಿ, 1 ರಿಂದ 9 ನೇ ತರಗತಿಯವರೆಗೆ ಯಮಕೇಶ್ವರದ ಬಳಿಯ ಚಮ್‌ಕೋಟ್‌ಖಾಲ್‌ನ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ.