ಕರ್ನಾಟಕ

karnataka

ETV Bharat / bharat

ನೋಟುಗಳ ಮೇಲೆ ಲಕ್ಷ್ಮಿ- ಗಣೇಶ ದೇವರ ಚಿತ್ರ ಮುದ್ರಿಸಿ: ಕೇಂದ್ರಕ್ಕೆ ಸಿಎಂ ಕೇಜ್ರಿವಾಲ್ ಆಗ್ರಹ

ಇಂಡೋನೇಷ್ಯಾದಲ್ಲಿ ಹಿಂದೂಗಳ ಜನಸಂಖ್ಯೆ ಕೇವಲ ಶೇ 2 ರಷ್ಟಿದೆ. ಆದರೂ ಅಲ್ಲಿನ ಕರೆನ್ಸಿ ನೋಟುಗಳ ಮೇಲೆ ಗಣೇಶ ದೇವರ ಭಾವಚಿತ್ರ ಇರುತ್ತದೆ. ಹೀಗಿರುವಾಗ ಭಾರತದಲ್ಲಿ ಇದು ಏಕೆ ಸಾಧ್ಯವಿಲ್ಲ ಎಂದು ಸಿಎಂ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ನೋಟುಗಳ ಮೇಲೆ ಲಕ್ಷ್ಮಿ-ಗಣೇಶ ದೇವರ ಚಿತ್ರ ಮುದ್ರಿಸಿ: ಸಿಎಂ ಕೇಜ್ರಿವಾಲ್ ಆಗ್ರಹ
photo-of-lakshmi-ganesh-with-gandhiji-should-be-printed-on-indian-currency-arvind-kejriwal

By

Published : Oct 26, 2022, 2:00 PM IST

ನವದೆಹಲಿ: ಭಾರತದ ಕರೆನ್ಸಿ ನೋಟುಗಳ ಮೇಲೆ ಗಾಂಧೀಜಿ ಭಾವಚಿತ್ರದೊಂದಿಗೆ ಲಕ್ಷ್ಮಿ ಮತ್ತು ಗಣೇಶ ದೇವರುಗಳ ಚಿತ್ರಗಳನ್ನೂ ಮುದ್ರಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಎರಡು ದಿನಗಳ ಹಿಂದೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪೂಜೆ ಮಾಡುವಾಗ ತಮಗೆ ಈ ವಿಚಾರ ಹೊಳೆಯಿತು ಎಂದು ಹೇಳಿದ್ದಾರೆ.

ಸಮಾಜದ ವಿವಿಧ ಸ್ತರಗಳ ಜನರೊಂದಿಗೆ ಮಾತನಾಡಿ ಈ ಬಗ್ಗೆ ಕೇಳಿದಾಗ ಎಲ್ಲರೂ ಇದನ್ನು ಉತ್ತಮ ವಿಚಾರ ಎಂದಿದ್ದಾರೆ. ಇಂಡೋನೇಷ್ಯಾದಲ್ಲಿ ಹಿಂದೂಗಳ ಜನಸಂಖ್ಯೆ ಕೇವಲ ಶೇ 2 ರಷ್ಟಿದೆ. ಆದರೂ ಅಲ್ಲಿನ ಕರೆನ್ಸಿ ನೋಟುಗಳ ಮೇಲೆ ಗಣೇಶ ದೇವರ ಭಾವಚಿತ್ರವಿರುತ್ತದೆ. ಹೀಗಿರುವಾಗ ಭಾರತದಲ್ಲಿ ಇದು ಏಕೆ ಸಾಧ್ಯವಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಕರೆನ್ಸಿ ನೋಟುಗಳ ಮೇಲೆ ಲಕ್ಷ್ಮಿ ಮತ್ತು ಗಣೇಶ ದೇವರ ಭಾವಚಿತ್ರ ಮುದ್ರಿಸುವ ಕುರಿತಂತೆ ತಾವು ಶೀಘ್ರದಲ್ಲೇ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯವುದಾಗಿ ಸಿಎಂ ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ: 2,000 ರೂ. ಕರೆನ್ಸಿ ಮುದ್ರಣ ಪ್ರಮಾಣ ಇಳಿಕೆ... ಮರೆಯಾಗುತ್ತಾ ಪಿಂಕ್‌ ನೋಟು?

ABOUT THE AUTHOR

...view details