ಕರ್ನಾಟಕ

karnataka

ETV Bharat / bharat

ಕಚೇರಿಯಲ್ಲಿ ಕೆಲಸ ಮಾಡಿದ ಮದುಮಗ.. ಫೋಟೋ ಸಖತ್ ವೈರಲ್ - Pauri

ಕೆಲವು ಪ್ರಮುಖ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಬೇಕಾಗಿದ್ದರಿಂದ ಅವರು ಕಚೇರಿಗೆ ತೆರಳಿದ್ದಾರೆ. ಈ ಸಮಯದಲ್ಲಿ ಸ್ನೇಹಿತರೊಬ್ಬರು ಫೋಟೋ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ..

Photo of a groom working in the office went viral
ಕಚೇರಿಯಲ್ಲಿ ಕೆಲಸ ಮಾಡಿದ ಮದುಮಗ

By

Published : Nov 28, 2020, 5:23 PM IST

ಉತ್ತರಾಖಂಡ :ಸೆಹ್ರಾ ಧರಿಸಿದ ಮದುಮಗನೊಬ್ಬ ತನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಫೋಟೋವೊಂದು ವೈರಲ್ ಆಗಿದೆ. ಆ ವ್ಯಕ್ತಿಯನ್ನು ಪುರಿಯ ಜಿಲ್ಲಾ ಹೋಮಿಯೋಪತಿ ವೈದ್ಯಕೀಯ ವಿಭಾಗದ ಹಿರಿಯ ಸಹಾಯಕ ಪ್ರೀತಂ ಗೈರೋಲಾ ಎಂದು ಗುರುತಿಸಲಾಗಿದೆ.

ಪ್ರೀತಮ್ ಅವರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಜನರಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆಯುತ್ತಿದೆ. ಅವರ ವಿವಾಹವು ನವೆಂಬರ್ 27ಕ್ಕೆ ನಿಶ್ಚಯವಾಗಿತ್ತು. ಸಂಪ್ರದಾಯದಂತೆ 26 ರಂದು ಮದುಮಗನಾದ ಬಳಿಕ, ಕಚೇರಿಗೆ ಹೋಗಿ ಸುಮಾರು ಒಂದೂವರೆ ಗಂಟೆ ಕೆಲಸ ಮಾಡಿದ್ದಾರೆ.

ಕೆಲವು ಪ್ರಮುಖ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಬೇಕಾಗಿದ್ದರಿಂದ ಅವರು ಕಚೇರಿಗೆ ತೆರಳಿದ್ದಾರೆ. ಈ ಸಮಯದಲ್ಲಿ ಸ್ನೇಹಿತರೊಬ್ಬರು ಫೋಟೋ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಪ್ರೀತಮ್ ಅವರ ಈ ಕಾರ್ಯಕ್ಕೆ ಉನ್ನತ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details