ಹೈದರಾಬಾದ್ (ತೆಲಂಗಾಣ): ತೆಲಂಗಾಣದ ಟಿಆರ್‌ಎಸ್ ಶಾಸಕರ ಖರೀದಿ ಯತ್ನ ಆರೋಪ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಪ್ರಮುಖ ಆರೋಪಿ ಮತ್ತು ಟಿಆರ್‌ಎಸ್ ಶಾಸಕರ ನಡುವಿನ ದೂರವಾಣಿ ಸಂಭಾಷಣೆ ಎನ್ನಲಾದ ಆಡಿಯೋ ಶುಕ್ರವಾರ ಹೊರಬಿದ್ದಿದೆ.
ಶಾಸಕ ಪೈಲಟ್ ರೋಹಿತ್ ರೆಡ್ಡಿ ಹಾಗೂ ಶಾಸಕರ ಖರೀದಿಯ ಏಜೆಂಟರುಗಳು ಎನ್ನಲಾದ ರಾಮಚಂದ್ರ ಭಾರತಿ, ನಂದ ಕುಮಾರ್ ನಡುವಿನ 14 ನಿಮಿಷಗಳ ಆಡಿಯೋ ಸಂಭಾಷಣೆ ಇದು ಎಂದು ಹೇಳಲಾಗುತ್ತಿದೆ. ಇದನ್ನು ಟಿಆರ್‌ಎಸ್ ಬಿಡುಗಡೆ ಮಾಡಿದೆ ಎಂದು ಆರೋಪಿಸಲಾಗಿದೆ.
ಟಿಆರ್‌ಎಸ್ ಶಾಸಕರ ಖರೀದಿ ಯತ್ನ ಆರೋಪ: ಮಹತ್ವದ ಆಡಿಯೋ ಸಂಭಾಷಣೆ ವೈರಲ್ ಇದನ್ನೂ ಓದಿ:ಟಿಆರ್ಎಸ್ನ ನಾಲ್ವರು ಶಾಸಕರ ಖರೀದಿ ಯತ್ನ: ಫಾರ್ಮ್‌ಹೌಸ್‌ನಲ್ಲಿ ನೋಟುಗಳ ಬಂಡಲ್ ಸಮೇತ ನಾಲ್ವರ ಸೆರೆ
ಶಾಸಕರ ಖರೀದಿ ಯತ್ನದ ಆರೋಪದ ಮೇಲೆ ಬುಧವಾರ ರಾತ್ರಿ ಹೈದರಾಬಾದ್ ಸಮೀಪದ ಮೊಯಿನಾಬಾದ್‌ನಲ್ಲಿರುವ ಫಾರ್ಮ್‌ಹೌಸ್ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದರು. ಈ ವೇಳೆ ನಾಲ್ವರು ಟಿಆರ್‌ಎಸ್ ಶಾಸಕರು ಕೂಡ ಇದ್ದರು. ಅಲ್ಲದೇ, ಟಿಆರ್‌ಎಸ್ ಬಿಡಲು ನಮಗೆ ಬಿಜೆಪಿಯಿಂದ 100 ಕೋಟಿ ರೂ ಹಾಗೂ ಗುತ್ತಿಗೆ ಆಮಿಷವೊಡ್ಡಲಾಗಿದೆ ಎಂದು ಶಾಸಕರು ಆರೋಪಿಸಿದ್ದರು.
ಇದನ್ನೂ ಓದಿ:ಟಿಆರ್‌ಎಸ್ ಶಾಸಕರ ಖರೀದಿ ಯತ್ನ ಪ್ರಕರಣ: ದೇವಸ್ಥಾನದಲ್ಲಿ ಆಣೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ