ಕೋಲ್ಕತ್ತಾ/ಗುವಾಹಟಿ:ಪಂಚರಾಜ್ಯ ವಿಧಾನಸಭೆ ಚುನಾವಣೆಯ ಭಾಗವಾದ ಪಶ್ಚಿಮ ಬಂಗಾಳ ಹಾಗೂ ಅಸ್ಸೋಂನಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ. ಸಂಜೆ 5 ಗಂಟೆಯವರೆಗೆ ಬಂಗಾಳದಲ್ಲಿ ಶೇ.72.25, ಅಸ್ಸೋಂನಲ್ಲಿ ಶೇ.67.60ರಷ್ಟು ಮತದಾನವಾಗಿದೆ.
ಪಶ್ಚಿಮ ಬಂಗಾಳದಲ್ಲಿ ಈ ಹಂತದಲ್ಲಿ 152 ಪುರುಷರು ಮತ್ತು 19 ಮಹಿಳೆಯರು ಸೇರಿ 30 ಕ್ಷೇತ್ರಗಳ 171 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 76,07,667 ಮತದಾರರು 8,332 ಮತಗಟ್ಟೆಗಳಲ್ಲಿ ಹಕ್ಕು ಚಲಾಯಿಸುತ್ತಿದ್ದಾರೆ. ಸಿಎಂ ಮಮತಾ ಬ್ಯಾನರ್ಜಿ ಸ್ಪರ್ಧಿಸಿರುವ ನಂದಿಗ್ರಾಮ ಕ್ಷೇತ್ರವು ಎಲ್ಲರ ಗಮನ ಸೆಳೆದಿದ್ದು, ಬಿಜೆಪಿಯ ಸುವೆಂದು ಅಧಿಕಾರಿ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದಾರೆ. ಮತದಾರರು ಮತಗಟ್ಟೆಗಳಲ್ಲಿ ಸಾಲಾಗಿ ನಿಂತು ಮತದಾನ ಕಾರ್ಯದಲ್ಲಿ ತೊಡಗಿದ್ದಾರೆ.