ನವದೆಹಲಿ: ನಗರದ ಸಿಕ್ಸ್ ಟೂಟಿ ಚೌಕ್ ಬಳಿಯ ಪಹರಗಂಜ್ನಲ್ಲಿ ಗುರುವಾರ ಮನೆ ಕಟ್ಟಡ ಕುಸಿದು ಅವಶೇಷಗಳ ಅಡಿ ಸುಮಾರು 30 ಜನರು ಸಿಲುಕಿಕೊಂಡಿದ್ದರು. ಕೂಡಲೆ ಅಗ್ನಿಶಾಮಕ ದಳ ಘಟನೆ ಸ್ಥಳಕ್ಕೆ ಆಗಮಸಿ ಸಿಲುಕಿಕೊಂಡಿದ್ದ ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಜೆ 5 ಗಂಟೆ ಸುಮಾರಿಗೆ ಘಟನೆ ಕುರಿತು ಸ್ಥಳಿಯರೊಬ್ಬರು ಪೊಲೀಸರಿಗೆ ಕರೆ ಮಾಡಿದ್ದು ತಕ್ಷಣ ಡಿಎಫ್ಎಸ್ ಮತ್ತು ಬಿಎಸ್ಇಎಸ್ ದಳ ಸ್ಥಳಕ್ಕಾಗಮಿಸಿ ಕಟ್ಟಡದ ಅಡಿ ಸಿಲುಕಿಕೊಂಡಿದ್ದ 10 ಕುಟುಂಬದ 30 ಜನರನ್ನು ರಕ್ಷಿಸಿದ್ದಾರೆ. ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಕತ್ರಾ ರಾಮ್ ನಗರದ ಪಕ್ಕದ ಕಟ್ಟಡಗಳು ಕೂಡ ಕುಸಿಯುವ ಸ್ಥಿತಯಲ್ಲಿವೆ ಎಂದು ತಿಳಿದು ಬಂದಿದೆ.