ಹೈದರಾಬಾದ್:ಮಹಾಮಾರಿ ಕೊರೊನಾ ವೈರಸ್ ವಿರುದ್ಧ ರಾಮಾಬಾಣವಾಗಿ ಬಳಕೆ ಮಾಡ್ತಿರುವ ಫೈಜರ್ ಲಸಿಕೆ ಸುಮಾರು ಆರು ತಿಂಗಳ ಕಾಲ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಲ್ಯಾನ್ಸೆಟ್ ಮೆಡಿಕಲ್ ಜರ್ನಲ್‌ನಲ್ಲಿ ಇದಕ್ಕೆ ಸಂಬಂಧಿಸಿದಂತೆ ವರದಿ ಪ್ರಕಟಗೊಂಡಿದ್ದು, ಫೈಜರ್ ಲಸಿಕೆ ಡೆಲ್ಟಾ ಸೇರಿದಂತೆ ಎಲ್ಲ ಸೋಂಕಿನ ವಿರುದ್ಧ ಕನಿಷ್ಠ ಆರು ತಿಂಗಳ ಕಾಲ ಶೇ. 90ರಷ್ಟು ಪರಿಣಾಮಕಾರಿಯಾಗಿ ಹೋರಾಡುತ್ತದೆ ಎಂದು ತಿಳಿಸಲಾಗಿದೆ. ಫೈಜರ್ ಎರಡನೇ ಡೋಸ್ ಪಡೆದ 6 ತಿಂಗಳ ಬಳಿಕೆ ಶೇ. 88ರಿಂದ ಶೇ. 47ಕ್ಕೆ ಅವರ ಪರಿಣಾಮಕಾರತ್ವ ಕಡಿಮೆಯಾಗುತ್ತದೆ ಎನ್ನಲಾಗಿದ್ದು, ಸುಮಾರು ಆರು ತಿಂಗಳ ಕಾಲ ಕೋವಿಡ್ನ ಡೆಲ್ಟಾ ರೂಪಾಂತರದ ವಿರುದ್ಧ ಪರಿಣಾಮಕಾರಿ ಎಂದು ವಿಶ್ಲೇಷಣೆ ಮಾಡಲಾಗಿದೆ.