ಮುಂಬೈ (ಮಹಾರಾಷ್ಟ್ರ): ದೇಶದಲ್ಲಿ ವಿಧ್ವಂಸಕ ಚಟುವಟಿಕೆಗಳು ಮತ್ತು ಗಲಭೆ ಸೃಷ್ಟಿಗೆ ಸಂಚು ಆರೋಪದ ಮೇಲೆ ಬಂಧಿತರಾಗಿರುವ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಶಂಕಿತರ ವಿಚಾರಣೆ ವೇಳೆ ಮಹತ್ವದ ಅಂಶ ಬಯಲಿಗೆ ಬಂದಿದೆ. ರಾಮಮಂದಿರ ಕೆಡವಲು ಮತ್ತು ಬಾಬರಿ ಮಸೀದಿಯನ್ನು ಮರುನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.
ಮಹಾರಾಷ್ಟ್ರದಲ್ಲಿ ಬಂಧಿತರಾದ ಪಿಎಫ್‌ಐ ಮುಖಂಡರ ವಿಚಾರಣೆ ವೇಳೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ ಎಂದು ನಾಸಿಕ್ ನ್ಯಾಯಾಲಯಕ್ಕೆ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತರಿಂದ ವಶಪಡಿಸಿಕೊಂಡಿರುವ ಹಾರ್ಡ್ ಡಿಸ್ಕ್‌ಗಳಲ್ಲಿನ ದತ್ತಾಂಶ ಪ್ರಕಾರ ರಾಮಮಂದಿರ ಕೆಡವಲು ಮತ್ತು ಬಾಬರಿ ಮಸೀದಿ ಮರುನಿರ್ಮಾಣ ಹಾಗೂ 2047ರ ವೇಳೆಗೆ ಮುಸ್ಲಿಂ ರಾಷ್ಟ್ರ ನಿರ್ಮಿಸಲು ಯೋಜಿಸಲಾಗಿತ್ತು ಎಂದು ನ್ಯಾಯಾಲಯಕ್ಕೆ ಅಧಿಕಾರಿಗಳು ತಿಳಿಸಿದ್ದಾರೆ.