ಕರ್ನಾಟಕ

karnataka

ETV Bharat / bharat

ಲಖನೌದಲ್ಲಿ ಆರು ಪಿಎಫ್​ಐ ಕಾರ್ಯಕರ್ತರ ಬಂಧನ.. ಎನ್​ಐಎ ಕೇರಳ ಕೋರ್ಟ್​ಗೆ ಸಲ್ಲಿಸಿದ ವರದಿಯಲ್ಲೇನಿದೆ? - ಸಾರ್ವಜನಿಕ ನೆಮ್ಮದಿಗೆ ಭಂಗ

ಪಿಎಫ್​ಐ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಮತ್ತು ಕಾರ್ಯಕರ್ತರು ಹಾಗೂ ಇತರರು ಮುಸ್ಲಿಂ ಯುವಕರನ್ನು ಇಸ್ಲಾಮಿಕ್ ಸ್ಟೇಟ್ (ಐಎಸ್‌ಐಎಸ್) ನಂತಹ ನಿಷೇಧಿತ ಸಂಘಟನೆಗಳಿಗೆ ಸೇರಲು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಎನ್‌ಐಎ ನ್ಯಾಯಾಲಯಕ್ಕೆ ತಿಳಿಸಿದೆ. ಅಷ್ಟೇ ಅಲ್ಲದೇ ಎಟಿಎಸ್​ ಆರು ಪಿಎಫ್​ಐ ಕಾರ್ಯಕರ್ತರನ್ನು ಬಂಧಿಸಿದೆ.

PFI encouraged youth to join LeT  establish Islamic rule in India  NIA raid on Popular Front of India  PFI encouraged youths to join terrorist groups  ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆ  ಎನ್​ಐಎ ರಿಮಾಂಡ್​ ಪ್ರತಿ ಬಹಿರಂಗ  ನಿಷೇಧಿತ ಸಂಘಟನೆಗಳಿಗೆ ಸೇರಲು ಪ್ರೋತ್ಸಾಹ  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ  ಸಾರ್ವಜನಿಕ ನೆಮ್ಮದಿಗೆ ಭಂಗ  ಪಿಎಫ್‌ಐನ ಶಿಕ್ಷಣ ವಿಭಾಗದ ರಾಷ್ಟ್ರೀಯ ಉಸ್ತುವಾರಿ
ಎನ್​ಐಎ ರಿಮಾಂಡ್​ ಪ್ರತಿ ಬಹಿರಂಗ

By

Published : Sep 24, 2022, 2:07 PM IST

Updated : Sep 24, 2022, 2:14 PM IST

ಲಖನೌ/ಕೊಚ್ಚಿ:ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೇಲೆ ಎನ್​ಐಎ ದಾಳಿ ಬಳಿಕ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳವು ಎರಡು ಪಟ್ಟಣಗಳಿಂದ ಪಿಎಫ್​ಐ ಸಂಘಟನೆಯ ಆರು ಸದಸ್ಯರನ್ನು ಬಂಧಿಸಿದೆ. ಬಂಧನದ ವೇಳೆ ‘ಆಕ್ಷೇಪಾರ್ಹ ಸಾಹಿತ್ಯ’ ಸೇರಿದಂತೆ ಇತರ ವಸ್ತಗಳನ್ನು ಎಟಿಎಸ್​ ವಶಪಡಿಸಿಕೊಂಡಿದೆ.

ಶುಕ್ರವಾರ ಮತ್ತು ಶನಿವಾರದ ಮಧ್ಯರಾತ್ರಿಯಲ್ಲಿ ಮೀರತ್‌ನಿಂದ ಪಿಎಫ್‌ಐನ ನಾಲ್ವರು ಸದಸ್ಯರು ಮತ್ತು ವಾರಣಾಸಿಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಮೀರತ್‌ನಲ್ಲಿ ಬಂಧಿತ ಆರೋಪಿಗಳನ್ನು ಶಾಮ್ಲಿ ಮೂಲದ ಮೊಹಮ್ಮದ್ ಶಾದಾಬ್ ಅಜೀಜ್ ಖಾಸ್ಮಿ, ಮೌಲಾನಾ ಸಾಜಿದ್ (ಶಾಮ್ಲಿ), ಮುಫ್ತಿ ಶಹಜಾದ್ (ಗಾಜಿಯಾಬಾದ್), ಮೊಹಮ್ಮದ್ ಇಸ್ಲಾಂ ಖಾಸ್ಮಿ (ಮುಜಾಫರ್‌ನಗರ) ಎಂದು ಗುರುತಿಸಲಾಗಿದೆ. ವಾರಣಾಸಿಯ ಕಜಕ್‌ಪುರ ರೈಲ್ವೇ ಕ್ರಾಸಿಂಗ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಯಿಂದ ರಿಜ್ವಾನ್ ಅಹ್ಮದ್ ಮತ್ತು ಮೊಹಮ್ಮದ್ ಶಾಹಿದ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

15 ರಾಜ್ಯಗಳಲ್ಲಿ ಹರಡಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರ ವಿರುದ್ಧ ನಡೆಸಲಾದ ಅತಿದೊಡ್ಡ ದಾಳಿಗೆ ‘ಆಪರೇಷನ್ ಆಕ್ಟೋಪಸ್’ ಎಂದು ಕೋಡ್ ಹೆಸರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಜಂಟಿ ತಂಡಗಳು ಸೆಪ್ಟೆಂಬರ್ 22 ರಂದು ಹಲವು ರಾಜ್ಯಗಳಾದ್ಯಂತ ದಾಳಿ ನಡೆಸಿ 106 ಪಿಎಫ್‌ಐ ಸದಸ್ಯರನ್ನು ಬಂಧಿಸಿವೆ.

ಕೇರಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ಅದರ ಪದಾಧಿಕಾರಿಗಳು, ಸದಸ್ಯರು ಮತ್ತು ಅಂಗಸಂಸ್ಥೆಗಳು ಲಷ್ಕರ್-ಎ-ತೈಬಾ (ಎಲ್‌ಇಟಿ), ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಸೇರಿದಂತೆ ಭಯೋತ್ಪಾದಕ ಸಂಘಟನೆಗಳಿಗೆ ಸೇರಲು ದುರ್ಬಲ ಯುವಕರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಐಸಿಸ್ ನಂತಹ ಭಯೋತ್ಪಾದಕ ಕೃತ್ಯವನ್ನು ನಡೆಸುವ ಮೂಲಕ ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸಲು ಸಂಚು ರೂಪಿಸಿದ್ದಾರೆ ಎಂದು ಕೇರಳದ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಎನ್‌ಐಎ ರಿಮಾಂಡ್ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

ಕೇರಳದಿಂದ ಕಾರ್ಯನಿರ್ವಹಿಸುತ್ತಿರುವ ಪಿಎಫ್‌ಐ ಸದಸ್ಯರು ಮತ್ತು ಕಾರ್ಯಕರ್ತರು ವಿವಿಧ ಧರ್ಮಗಳು ಮತ್ತು ಗುಂಪುಗಳ ಸದಸ್ಯರ ನಡುವೆ ದ್ವೇಷವನ್ನು ಸೃಷ್ಟಿಸುವ ಮೂಲಕ ಕಾನೂನುಬಾಹಿರ ಚಟುವಟಿಕೆಗಳು, ಸಾಮರಸ್ಯದ ನಿರ್ವಹಣೆಗೆ ಪೂರ್ವಾಗ್ರಹ, ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಮತ್ತು ಭಾರತದ ವಿರುದ್ಧ ಅಸಮಾಧಾನವನ್ನು ಉಂಟುಮಾಡುವ ಉದ್ದೇಶದಿಂದ ಸಂಚು ರೂಪಿಸುತ್ತಿದ್ದಾರೆ ಎಂದು ಕೇಂದ್ರ ಸಂಸ್ಥೆ ಆರೋಪಿಸಿದೆ. ಆರೋಪಿಗಳಾದ ಪಿಎಫ್‌ಐನ ಶಿಕ್ಷಣ ವಿಭಾಗದ ರಾಷ್ಟ್ರೀಯ ಉಸ್ತುವಾರಿ ಕರಮಾನ ಅಶ್ರಫ್ ಮೌಲವಿ ಮತ್ತು ಇತರರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲು ಸಲ್ಲಿಸಿದ ಅರ್ಜಿಯಲ್ಲಿ ಈ ವಿಷಯ ಬಹಿರಂಗವಾಗಿದೆ. ಪ್ರಕರಣದ ತನಿಖೆಯನ್ನು ಎನ್‌ಐಎ ಕೊಚ್ಚಿ ಶಾಖೆ ನಡೆಸುತ್ತಿದೆ.

ಓದಿ:ದೇಶಾದ್ಯಂತ 93 ಸ್ಥಳಗಳಲ್ಲಿ ಎನ್​​ಐಎ ದಾಳಿ.. 106 ಪಿಎಫ್​ಐ ಕಾರ್ಯಕರ್ತರ ಬಂಧನ

Last Updated : Sep 24, 2022, 2:14 PM IST

ABOUT THE AUTHOR

...view details