ನವದೆಹಲಿ:ಪೆಟ್ರೋಲಿಯಂ ಕಂಪನಿಗಳು ದರ ಏರಿಸಿದ ಹಿನ್ನೆಲೆ ಅಡುಗೆ ಅನಿಲ ದರ ಏರಿಕೆಯಾಗಿದೆ. ಸಬ್ಸಿಡಿ ರಹಿತ ಗೃಹ ಬಳಕೆ ಅಡುಗೆ ಅನಿಲ ದರ 25 ರೂಪಾಯಿ ಏರಿಕೆಯಾಗಿದ್ದು, ಇಂದಿನಿಂದ ಪರಿಷ್ಕೃತ ದರ ಜಾರಿಯಾಗಲಿದೆ.
ತಿಂಗಳ ಮೊದಲ ದಿನವೇ ಬೆಲೆ ಏರಿಕೆ ಬಿಸಿ..ಅಡುಗೆ ಅನಿಲ ಸಿಲಿಂಡರ್ ಬೆಲೆ 25 ರೂ. ಏರಿಕೆ - ಣಿಜ್ಯ ಬಳಕೆಯ ಸಿಲಿಂಡರ್
ಇಂದಿನಿಂದ ಸಬ್ಸಿಡಿ ರಹಿತ ಸಿಲಿಂಡರ್ ಹಾಗೂ ವಾಣಿಜ್ಯ ಬಳಿಕೆಯ ಸಿಲಿಂಡರ್ ದರದಲ್ಲಿ ಏರಿಕೆಯಾಗಲಿದ್ದು, ಕ್ರಮವಾಗಿ 25 ಹಾಗೂ 75 ರೂಪಾಯಿ ಏರಿಕೆಯಾಗಲಿದೆ.
ಅಡುಗೆ ಅನಿಲ ದರ
ತಿಂಗಳ ಮೊದಲ ದಿನವೇ ಬೆಲೆ ಏರಿಕೆ ಬಿಸಿ..ಅಡುಗೆ ಅನಿಲ ಸಿಲಿಂಡರ್ ಬೆಲೆ 25 ರೂ. ಏರಿಕೆ
ಈ ಹಿನ್ನೆಲೆ ದೆಹಲಿಯಲ್ಲಿ 14.2 ಕೆ.ಜಿ ಸಿಲಿಂಡರ್ನ ಬೆಲೆ ಇದೀಗ ಪರಿಷ್ಕೃತ ದರದಂತೆ 884.50ಕ್ಕೆ ತಲುಪಿದೆ. ಈ ನಡುವೆ ವಾಣಿಜ್ಯ ಬಳಕೆಯ ಸಿಲಿಂಡರ್ ದರ ಸಹ 75 ರೂಪಾಯಿ ಏರಿಕೆಯಾಗಿದ್ದು, 19 ಕೆ.ಜಿ ಸಿಲಿಂಡರ್ಗೆ 1,693 ರೂಪಾಯಿ ನೀಡಬೇಕಿದೆ.
ಈ ದರಗಳು ಇಂದಿನಿಂದಲೇ ಜಾರಿಯಾಗಲಿದ್ದು, ಗ್ರಾಹಕರಿಗೆ ತೈಲ ದರ ಏರಿಕೆ ನಡುವೆ ಇನ್ನಷ್ಟು ಹೊರೆಯಾಗಲಿವೆ.
Last Updated : Sep 1, 2021, 1:25 PM IST