ಭರೂಚ್(ಗುಜರಾತ್): ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರ ಕ್ರೇಜ್ ದೇಶಾದ್ಯಂತ ಹೆಚ್ಚಾಗುತ್ತಿದೆ. ಇಲ್ಲೊಂದು ಪೆಟ್ರೋಲ್ ಬಂಕ್ ವಿನೂತನವಾಗಿ ಸಂಭ್ರಮಿಸುತ್ತಿದೆ.
ಹೌದು, ಗುಜರಾತ್ನ ಭರೂಚ್ ಜಿಲ್ಲೆಯ ನೆತ್ರಾಂಗ್ ನಗರದಲ್ಲಿ ಪೆಟ್ರೋಲ್ ಬಂಕ್ನಲ್ಲಿ ನೀರಜ್ ಎಂದು ಹೆಸರಿಟ್ಟುಕೊಂಡಿರುವ ಜನರಿಗೆ 501 ರೂಪಾಯಿಯ ಇಂಧನವನ್ನು ಉಚಿತವಾಗಿ ನೀಡಲಾಗುತ್ತಿದೆ.
ಅಯೂಬ್ ಪಠಾಣ್ ಎಂಬಾತನ ಒಡೆತನದಲ್ಲಿರುವ ಎಸ್ಪಿ ಪೆಟ್ರೋಲಿಯಂ ಎಂಬ ಹೆಸರಿನ ಪೆಟ್ರೋಲ್ ಬಂಕ್ಗೆ ಬರುವ ವಾಹನ ಸವಾರರು, ಐಡಿ ಕಾರ್ಡ್ ತೋರಿಸಿ, ತಮ್ಮ ಹೆಸರನ್ನು ನೀರಜ್ ಎಂದು ದೃಢಪಡಿಸಿ, ಆಫರ್ ತಮ್ಮದಾಗಿಸಿಕೊಳ್ಳಬಹುದು.