ಕರ್ನಾಟಕ

karnataka

ETV Bharat / bharat

ನಿಲ್ಲದ ತೈಲ ದರ ಹೆಚ್ಚಳ: ಯಾವ್ಯಾವ ರಾಜ್ಯಗಳಲ್ಲಿ ಎಷ್ಟಿದೆ ಇಂಧನ ಬೆಲೆ?! - ಪ್ರಧಾನಿ ಮೋದಿ

ನಿರಂತರವಾಗಿ ತೈಲ ದರ ಏರಿಕೆಯಾಗುತ್ತಿದ್ದು, ಗ್ರಾಹರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ಯಾವ್ಯಾವ ರಾಜ್ಯಗಳಲ್ಲಿ ಎಷ್ಟಿದೆ ತೈಲ ದರ ಅನ್ನೋದರ ವರದಿ ಇಲ್ಲಿದೆ.

ನಿಲ್ಲದ ತೈಲ ದರ ಹೆಚ್ಚಳ
ನಿಲ್ಲದ ತೈಲ ದರ ಹೆಚ್ಚಳ

By

Published : Jul 15, 2021, 12:06 PM IST

ನವದೆಹಲಿ: ಸದ್ಯ ತೈಲ ದರ ಇಳಿಕೆಯಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಇಂದು ಪೆಟ್ರೋಲ್ ದರ 35 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್ ದರ 15 ಪೈಸೆ ಏರಿಕೆಯಾಗಿದೆ. ಆ ಮೂಲಕ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 101.54 ರೂ., ಪ್ರತಿ ಲೀಟರ್​​ ದರ ಡೀಸೆಲ್ ದರ 89.87 ರೂಪಾಯಿಯಾಗಿದೆ.

ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 107.54 ರೂ., ಲೀಟರ್ ಡೀಸೆಲ್ ದರ 97.45 ರೂ ಆಗಿದೆ. ಇಂಧನ ದರವನ್ನು ಮತ್ತೆ ಹೆಚ್ಚಿಸಿದ ನಂತರ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 107.54 ರೂ.ಗೆ ಏರಿದೆ.ಭೋಪಾಲ್​ನಲ್ಲಿ ಲೀಟರ್ ಪೆಟ್ರೋಲ್ ದರ 101.74 ರೂ.ಇದ್ದು, ಪ್ರತಿ ಲೀಟರ್‌ ಡೀಸೆಲ್ ದರ 98.67 ರೂನಷ್ಟಿದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ದರ 101.74 ರೂ, ಡೀಸೆಲ್ ದರ 93.02 ರೂಪಾಯಿಯಿದೆ. ಬೆಂಗಳೂರಿನಲ್ಲಿ ಲೀಟರ್​ ಪೆಟ್ರೋಲ್ ದರ 104.58 ರೂ, ಡೀಸೆಲ್​ ದರ 95.09 ರೂಪಾಯಿಗೆ ಹೆಚ್ಚಳವಾಗಿದೆ.

ಇದನ್ನೂ ಓದಿ:ಇಂದಿನಿಂದ ಜೊಮಾಟೊ IPO ಆರಂಭ: ಅಧಿಕೃತ ಮಾಹಿತಿ ಪ್ರಕಟಿಸಿದ ಸಂಸ್ಥೆ

ದೇಶಾದ್ಯಂತ ಹೆಚ್ಚುತ್ತಿರುವ ಇಂಧನ ದರ ಕಡಿಮೆ ಮಾಡುವಂತೆ ವಿಪಕ್ಷಗಳು ಆಗ್ರಹಿಸುತ್ತಿವೆ. ಆದರೂ, ನಿರಂತರವಾಗಿ ತೈಲ ದರ ಹೆಚ್ಚಳವಾಗುತ್ತಿದ್ದು, ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ.

ABOUT THE AUTHOR

...view details