ಕರ್ನಾಟಕ

karnataka

ETV Bharat / bharat

ಅಬಕಾರಿ ಸುಂಕ ಕಡಿತ : ತಮಿಳುನಾಡಿನಲ್ಲಿ 100 ಗಡಿಯಿಂದ ಕೆಳಗಿಳಿದ ಪೆಟ್ರೋಲ್ ದರ - Excise duty reduction

ರಾಜ್ಯ ಸರ್ಕಾರ ಅಬಕಾರಿ ಸುಂಕ ಕಡಿತ ಮಾಡಿದ ಬಳಿಕ ಇಂದಿನಿಂದ ತಮಿಳುನಾಡಿನಲ್ಲಿ ಪೆಟ್ರೋಲ್ ದರ 100 ಗಡಿಯಿಂದ ಕೆಳಗಿಳಿದಿದೆ.

Petrol price reduced at Tamil Nadu
ತಮಿಳುನಾಡು ಪೆಟ್ರೋಲ್ ದರ

By

Published : Aug 14, 2021, 9:14 AM IST

ಚೆನ್ನೈ (ತಮಿಳುನಾಡು):ರಾಜ್ಯದ ಜನತೆಗೆ ತೈಲ ದರದ ಹೊರೆಯನ್ನು ಕಡಿಮೆ ಮಾಡಲು ತಮಿಳುನಾಡು ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ (ಸೆಸ್) 3 ರೂಪಾಯಿ ಕಡಿತ ಮಾಡಿದ್ದು, ಇದರಿಂದ ರಾಜ್ಯದಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ದರ 99.49 ರೂ. ಆಗಿದೆ, ನಿನ್ನೆ 102.51 ಇತ್ತು. ಇನ್ನು ಡೀಸೆಲ್ ದರ ಸ್ಥಿರವಾಗಿದ್ದು, ನಿನ್ನೆ 94.40 ಇತ್ತು, ಇಂದು ಹಾಗೆಯೇ ಮುಂದುವರೆದಿದೆ.

ಸಿಎಂ ಎಂ.ಕೆ ಸ್ಟಾಲಿನ್​​ ನೇತೃತ್ವದ ಸರ್ಕಾರದ ಮೊದಲ ಬಜೆಟ್ ಶುಕ್ರವಾರ ಮಂಡನೆಯಾಗಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 3 ರೂ. ಕಡಿತ ಮಾಡುವುದಾಗಿ ಬಜೆಟ್​ ಮಂಡನೆ ಮಾಡಿರುವ ಹಣಕಾಸು ಸಚಿವ ಪಿಟಿಆರ್ ಪಳನಿವೇಲ್ ತ್ಯಾಗರಾಜನ್ ಘೋಷಣೆ ಮಾಡಿದ್ದಾರೆ. ಇದರಿಂದ ರಾಜ್ಯ ಸರ್ಕಾರಕ್ಕೆ ಪ್ರತಿ ವರ್ಷ 1,160 ಕೋಟಿ ರೂಪಾಯಿ ಆದಾಯ ನಷ್ಟವಾಗಲಿದೆ.

ಓದಿ : ವಾಹನ ಸವಾರರಿಗೆ ಸಿಹಿ ಸುದ್ದಿ.. ಈ ರಾಜ್ಯದಲ್ಲಿ ಪೆಟ್ರೋಲ್​ ಮೇಲಿನ ಟ್ಯಾಕ್ಸ್​​ ಕಡಿತ!

ಡ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಪೆಟ್ರೋಲ್ ದರ 5 ರೂ. ಕಡಿತ ಮಾಡುತ್ತೇವೆ ಎಂದು ಸಿಎಂ ಎಂ.ಕೆ. ಸ್ಟಾಲಿನ್ ಚುನಾವಣಾ ಪ್ರಚಾರದ ವೇಳೆ ಭರವಸೆ ನೀಡಿದ್ದರು. ಅದರಂತೆ, ಈಗ ಮೊದಲ ಹಂತದಲ್ಲಿ 3 ರೂ. ಕಡಿತ ಮಾಡಿದ್ದಾರೆ.

ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ, ಹರಿಯಾಣ, ಜಮ್ಮ- ಕಾಶ್ಮೀರ, ಒಡಿಶಾ, ಬಿಹಾರ, ಕೇರಳ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ತೈಲ ಬೆಲೆ ಈಗಾಗಲೇ 100ರ ಗಡಿ ದಾಟಿದೆ. ಕರ್ನಾಟಕದಲ್ಲಿ ಇಂದು ಪ್ರತೀ ಲೀಟರ್ ಡೀಸೆಲ್ ಬೆಲೆ 95.26 ಮತ್ತು ಪೆಟ್ರೋಲ್ ದರ 105.25 ಇದೆ.

ABOUT THE AUTHOR

...view details