ಕರ್ನಾಟಕ

karnataka

ETV Bharat / bharat

2021 - 22ರಲ್ಲಿ ಪೆಟ್ರೋಲ್​, ಡೀಸೆಲ್ ಬೆಲೆ 78 ಸಲ ಏರಿಕೆ: ಸದನದಲ್ಲಿ ಉತ್ತರ ನೀಡಿದ ಕೇಂದ್ರ

ದೇಶದಲ್ಲಿ ಅನೇಕ ಸಲ ಪೆಟ್ರೋಲ್​, ಡೀಸೆಲ್ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಾಗಿದೆ. 2021-22ರ ಅವಧಿಯಲ್ಲಿ ಎಷ್ಟು ಸಲ ತೈಲ ಬೆಲೆ ಏರಿಕೆಯಾಗಿದೆ ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

Petrol Price Hiked 78 Times
Petrol Price Hiked 78 Times

By

Published : Jul 25, 2022, 8:58 PM IST

ನವದೆಹಲಿ:ಮಳೆಗಾಲದ ಸಂಸತ್​ ಅಧಿವೇಶನ ಆರಂಭಗೊಂಡಿದ್ದು, ಈ ವೇಳೆ ಪ್ರತಿಪಕ್ಷಗಳು ಕೇಳುತ್ತಿರುವ ಅನೇಕ ಪ್ರಶ್ನೆಗಳಿಗೆ ಕೇಂದ್ರ ಸಚಿವರು ಉತ್ತರ ನೀಡ್ತಿದ್ದಾರೆ. ಇಂದು ಕೇಂದ್ರ ಪೆಟ್ರೋಲಿಯಂ ಮತ್ತು ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ 2021-22ರ ಹಣಕಾಸು ವರ್ಷದಲ್ಲಿ ಎಷ್ಟು ಸಲ ತೈಲ ಬೆಲೆ ಏರಿಕೆ ಮಾಡಲಾಗಿದೆ ಎಂಬುದರ ಬಗ್ಗೆ ಉತ್ತರ ನೀಡಿದ್ದಾರೆ.

2021-2022ರ ಹಣಕಾಸು ವರ್ಷದಲ್ಲಿ ಪೆಟ್ರೋಲ್​ ಬೆಲೆಯನ್ನ 78 ಸಲ ಹೆಚ್ಚಿಸಲಾಗಿದ್ದು, ಡೀಸೆಲ್​ ದರವನ್ನ 76 ಸಲ ಏರಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆಮ್​​ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಕೇಳಿದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಕೇಂದ್ರ ಸಚಿವರು ಉತ್ತರ ನೀಡಿದ್ದು, ಇದನ್ನ ಆಪ್​ ಸಂಸದರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕೇಂದ್ರ ಸಚಿವರು ನೀಡಿರುವ ಉತ್ತರದ ಪ್ರತಿ ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಸಂಸದ ರಾಘವ್​ ಚಡ್ಡಾ, ಇದು ಸಾಮಾನ್ಯ ಜನರನ್ನ ಲೂಟಿ ಮಾಡುವ ಸರ್ಕಾರದ ಸ್ಪಷ್ಟ ತಪ್ಪೊಪ್ಪಿಗೆಯಾಗಿದೆ ಎಂದಿದ್ದಾರೆ.

ಇದನ್ನೂ ಓದಿರಿ:ಸದನದೊಳಗೆ ಪ್ರತಿಭಟನೆ​​: ಕಾಂಗ್ರೆಸ್​ನ ನಾಲ್ವರು ಸಂಸದರು ಮಳೆಗಾಲ ಅಧಿವೇಶನದಿಂದ ಅಮಾನತು

ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಹಣದುಬ್ಬರ, ಬೆಲೆ ಏರಿಕೆ ವಿಚಾರವಾಗಿ ಸದನದಲ್ಲಿ ಚರ್ಚೆ ನಡೆಸುವಂತೆ ಆಗ್ರಹಿಸಿ, ಪ್ರತಿಭಟನೆ ನಡೆಸುತ್ತಿವೆ.

ABOUT THE AUTHOR

...view details