ಕರ್ನಾಟಕ

karnataka

By

Published : Jun 11, 2022, 11:19 AM IST

ETV Bharat / bharat

ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ ಎಷ್ಟು?

ಪೆಟ್ರೋಲ್​, ಡೀಸೆಲ್ ದರ ಹೀಗಿದೆ...

Petrol, Diesel Rate
Petrol, Diesel Rate

ಬೆಂಗಳೂರು/ನವದೆಹಲಿ: ದೇಶದಲ್ಲಿ ಇಂಧನ ದರಗಳು ನಿತ್ಯವೂ ಪರಿಷ್ಕರಿಸಲ್ಪಡುತ್ತವೆ. ತೈಲ ಬೆಲೆ ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಒಳಗೊಂಡಿರುತ್ತದೆ. ವ್ಯಾಟ್‌ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ. ತೈಲ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ.

ಇಂದಿನ ದರಗಳ ಬಗ್ಗೆ ತಿಳಿಯೋದಾದರೆ:ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 96.72 ರೂ.ಗೆ ಇದ್ದು, ಡೀಸೆಲ್ ಬೆಲೆ 89.62 ಆಗಿದೆ. ಮುಂಬೈನಲ್ಲಿ ಇತ್ತೀಚಿನ ಅಬಕಾರಿ ಸುಂಕ ಕಡಿತದ ನಂತರ ಪೆಟ್ರೋಲ್ ಪ್ರತಿ ಲೀಟರ್‌ಗೆ 111.35 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 97.28 ರೂ. ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 106.03 ರೂ. ಆಗಿದ್ದರೆ, ಡೀಸೆಲ್ ಬೆಲೆ 92.76 ರೂ. ಆಗಿದೆ.

ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 102.63 ರೂ. ಮತ್ತು ಡೀಸೆಲ್‌ಗೆ 94.24 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ.

ರಾಜ್ಯದಲ್ಲಿ ತೈಲ ದರ: ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಯಥಾಸ್ಥಿತಿಯಲ್ಲಿದೆ. ಪೆಟ್ರೋಲ್​ ಲೀಟರ್​ಗೆ 101.96 ರೂ.ಗೆ ಮಾರಾಟವಾಗುತ್ತಿದ್ದರೆ, ಡೀಸೆಲ್ 87.91ರೂ.ಗೆ ಮಾರಾಟವಾಗುತ್ತಿದೆ. ಹುಬ್ಬಳ್ಳಿಯಲ್ಲಿ ಪೆಟ್ರೋಲ್ ದರ ಒಂದು ಲೀಟರ್​ಗೆ 101.65 ರೂಪಾಯಿ ಮತ್ತು ಡೀಸೆಲ್​ ದರ ಒಂದು ಲೀಟರ್​ಗೆ 87.65 ರೂಪಾಯಿ ಇದೆ.

ಮಂಗಳೂರಿನಲ್ಲಿ ಪೆಟ್ರೋಲ್ ಲೀಟರ್​ಗೆ 101.13 ರೂಪಾಯಿ (52 ಪೈಸೆ ಇಳಿಕೆ), ಡೀಸೆಲ್ 87.13 (47 ಪೈಸೆ ಇಳಿಕೆ) ರೂ. ಗೆ ಮಾರಾಟವಾಗುತ್ತಿದೆ. ಮೈಸೂರಿನಲ್ಲಿ ಒಂದು ಲೀಟರ್‌ ಪೆಟ್ರೋಲ್​ಗೆ 101.44 ರೂಪಾಯಿ ಇದ್ದು, ಒಂದು ಲೀಟರ್‌ ಡೀಸೆಲ್​ಗೆ 87.43 ರೂಪಾಯಿ ಇದೆ. ದಾವಣಗೆರೆಯಲ್ಲಿ ಪೆಟ್ರೋಲ್ ಲೀಟರ್​ಗೆ 103.54 ರೂಪಾಯಿ ಇದ್ದು, ಲೀಟರ್​ ಡೀಸೆಲ್​ಗೆ 89.52 ರೂಪಾಯಿ ಇದೆ. ಶಿವಮೊಗ್ಗದಲ್ಲಿ ಪೆಟ್ರೋಲ್ ದರ 103.26 ರೂ, ಡೀಸೆಲ್ 89.04 ರೂ. ಇದೆ.

(ಇದನ್ನೂ ಓದಿ: ತಿರುಮಲನ ಆವರಣದಲ್ಲಿ ಪಾದರಕ್ಷೆ ಹಾಕಿ ಫೋಟೋಶೂಟ್​.. ಕ್ಷಮೆಯಾಚಿಸಿದ ನಯನತಾರ - ವಿಘ್ನೇಶ್​ ದಂಪತಿ!)

ABOUT THE AUTHOR

...view details