ಕರ್ನಾಟಕ

karnataka

ETV Bharat / bharat

ಸತತ 5ನೇ ದಿನವೂ ತೈಲ ದರ ಹೆಚ್ಚಳ: ಬೆಂಗಳೂರು ಸೇರಿ ಮಹಾನಗರಗಳಲ್ಲಿ ಹೊಸ ಬೆಲೆ ಹೀಗಿದೆ.. - ಇಂದಿನ ತೈಲ ದರದ ಮಾಹಿತಿ

ಇಂದು ದೇಶಾದ್ಯಂತ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿದೆ. ಹೈದರಾಬಾದ್‌ನಲ್ಲಿ ಡೀಸೆಲ್ ₹105 ರ ಗಡಿ ದಾಟಿದೆ. ಬೆಂಗಳೂರು, ಮುಂಬೈ, ಚೆನ್ನೈ ಸೇರಿದಂತೆ ಪ್ರಮುಖ ನಗರಗಳಲ್ಲಿ ತೈಲ ದರ ಎಷ್ಟಿದೆ ಎಂದು ಇಲ್ಲಿ ತಿಳಿದುಕೊಳ್ಳಿ.

petrol diesel prices
ತೈಲ ದರ

By

Published : Oct 24, 2021, 9:51 AM IST

ನವದೆಹಲಿ: ದೇಶಾದ್ಯಂತ ಸತತ ಐದನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಇಂದೂ ಸಹ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೈಲ ಕಂಪನಿಗಳು 35 ಪೈಸೆ ಹೆಚ್ಚಿಸಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 107.59 ರೂಪಾಯಿ ಹಾಗೂ ಡೀಸೆಲ್​ ದರ 96.32 ರೂಪಾಯಿ ಇದೆ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 113.46 ಕ್ಕೆ ಹಾಗೂ ಲೀಟರ್ ಡೀಸೆಲ್ 104.38 ರೂ. ಗೆ ಮಾರಾಟವಾಗುತ್ತಿದೆ. ಕೋಲ್ಕತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 108.11 ಕ್ಕೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ದರ 99.43 ರೂ. ಗೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಎಷ್ಟಿದೆ ತೈಲ ದರ?:

ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 111.34 ಕ್ಕೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ದರ 102.23 ರೂ. ಗೆ ಏರಿಕೆಯಾಗಿದೆ. ಹೈದರಾಬಾದ್‌ನಲ್ಲಿ ಸಹ ಡೀಸೆಲ್ ₹105 ರ ಗಡಿ ದಾಟಿದೆ. ಸದ್ಯಕ್ಕೆ ಹೈದರಾಬಾದ್​ನಲ್ಲಿ ಲೀಟರ್‌ ಪೆಟ್ರೋಲ್​ಗೆ 111.91 ರೂ. ಹಾಗೂ ಲೀಟರ್‌ ಡೀಸೆಲ್​ಗೆ 105.08 ರೂ. ಇದೆ. ಚೆನ್ನೈನಲ್ಲಿ ಪ್ರತಿ ಲೀಟರ್​ಗೆ ಪೆಟ್ರೋಲ್​ಗೆ 104.52 ರೂ. ಇದ್ದು, ಲೀಟರ್ ಡೀಸೆಲ್ 100.59 ಕ್ಕೆ ಲಭ್ಯವಿದೆ.

ಇಂದಿನ ತೈಲ ದರದ ಮಾಹಿತಿ

ಇನ್ನು ರಾಜಸ್ಥಾನದ ಗಂಗಾನಗರ ಪಟ್ಟಣದಲ್ಲಿ ಲೀಟರ್​ ಪೆಟ್ರೋಲ್​ಗೆ 119.79 ರೂ. ಇದ್ದು, ಡಿಸೇಲ್​ 110.63 ರೂ.ಗೆ ಲಭ್ಯವಾಗುತ್ತಿದೆ. ದೇಶಾದ್ಯಂತ ಸತತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು, ವಾಹನ ಸವಾರರಿಗೆ ಕೇಂದ್ರ ಸರ್ಕಾರ ಶಾಕ್‌ ನೀಡಿವೆ.

ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಕಂಪನಿಗಳು ಅಬಕಾರಿ ಸುಂಕಗಳ ಆಧಾರದ ಮೇಲೆ ಇಂಧನ ದರವನ್ನು ಹೆಚ್ಚಿಸುತ್ತಿರುತ್ತವೆ.

ABOUT THE AUTHOR

...view details