ಕರ್ನಾಟಕ

karnataka

ETV Bharat / bharat

ನಿರಂತರ ಏರಿಕೆ ಬಳಿಕ ಇಂದು ಇಂಧನ ದರ ಸ್ಥಿರ: ಬೆಂಗಳೂರಲ್ಲಿ ಪೆಟ್ರೋಲ್​, ಡೀಸೆಲ್​ ಬೆಲೆ ಹೀಗಿದೆ.. - ಪೆಟ್ರೋಲ್​, ಡೀಸೆಲ್​ ದರ

ಅಕ್ಟೋಬರ್ ​14 ರಿಂದ ಅ.17ರ ವರೆಗೆ ನಿರಂತರವಾಗಿ ಇಂಧನ ದರ ಹೆಚ್ಚಾಗಿದ್ದ ಕಾರಣ ನಿನ್ನೆ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಡೀಸೆಲ್​ ಬೆಲೆ ನೂರರ ಗಡಿ ದಾಟಿತ್ತು. ಪೆಟ್ರೋಲ್​ ದರ 109.53 ರೂ.ಗೆ ಏರಿಕೆಯಾಗಿತ್ತು. ಇಂದಿನ ಬೆಲೆ ನಿನ್ನೆಯಷ್ಟೇ ಇದೆ.

ಇಂಧನ ದರ
ಇಂಧನ ದರ

By

Published : Oct 18, 2021, 10:41 AM IST

ಮುಂಬೈ: ನಿನ್ನೆಯವರೆಗೆ ಸತತ ನಾಲ್ಕು ದಿನಗಳ ಕಾಲ ಇಂಧನ ದರ ಹೆಚ್ಚಿಸಿದ್ದ ತೈಲ ಕಂಪನಿಗಳು ಬೆಲೆ ಏರಿಕೆ ಓಟಕ್ಕೆ ಬ್ರೇಕ್​ ನೀಡಿದ್ದು, ಇಂದಿನ ಪೆಟ್ರೋಲ್​, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಪೆಟ್ರೋಲ್​, ಡೀಸೆಲ್ ಬೆಲೆ ನಿನ್ನೆಯಷ್ಟೇ ಇದೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್ ದರ 105.84 ರೂ. ಹಾಗೂ ಲೀಟರ್​ ಡೀಸೆಲ್ ಬೆಲೆ 94.57 ರೂ. ಇದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.

ಇದನ್ನೂ ಓದಿ: ಷೇರುಪೇಟೆಯಲ್ಲಿ ಗೂಳಿ ಓಟ: 61 ಸಾವಿರ ದಾಟಿ ಸಾರ್ವಕಾಲಿಕ ದಾಖಲೆ ಬರೆದ ಸೆನ್ಸೆಕ್ಸ್​

ಅಕ್ಟೋಬರ್ ​14 ರಿಂದ ಅ.17ರ ವರೆಗೆ ನಿರಂತರವಾಗಿ ಇಂಧನ ದರ ಹೆಚ್ಚಾಗಿದ್ದ ಕಾರಣ ನಿನ್ನೆ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಡೀಸೆಲ್​ ಬೆಲೆ ನೂರರ ಗಡಿ ದಾಟಿತ್ತು. ಪೆಟ್ರೋಲ್​ ದರ 109.53 ರೂ.ಗೆ ಏರಿಕೆಯಾಗಿತ್ತು.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್​, ಡೀಸೆಲ್ ಬೆಲೆ

ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಕಂಪನಿಗಳು ಅಬಕಾರಿ ಸುಂಕಗಳ ಆಧಾರದ ಮೇಲೆ ಇಂಧನ ದರವನ್ನು ಹೆಚ್ಚಿಸುತ್ತಿರುತ್ತವೆ. ಇಂದು ಬೆಲೆ ಏರಿಕೆಯಾಗದ ಕಾರಣ ಗ್ರಾಹಕರು ಕೊಂಚ ಸಮಾಧಾನವಾಗಿದ್ದಾರೆ.

ABOUT THE AUTHOR

...view details