ಕರ್ನಾಟಕ

karnataka

ETV Bharat / bharat

ಮತ್ತೆ ದಾಖಲೆ ಮಟ್ಟದಲ್ಲಿ ಇಂಧನ ದರ ಏರಿಕೆ: ಬೆಂಗಳೂರಿಗರೇ ಇಲ್ಲೊಮ್ಮೆ ಕಣ್ಣು ಹಾಯಿಸಿ.. - fuel rate today

ಬೆಂಗಳೂರಿನಲ್ಲಿ 31 ಪೈಸೆ ಏರಿಕೆಯೊಂದಿಗೆ ಲೀಟರ್​ ಪೆಟ್ರೋಲ್ ಬೆಲೆ 106.83ಕ್ಕೆ ಹಾಗೂ ಬರೋಬ್ಬರಿ 37 ಪೈಸೆ ಹೆಚ್ಚಳದೊಂದಿಗೆ ಡೀಸೆಲ್​ ದರ 97.40 ರೂ.ಗೆ ಏರಿಕೆಯಾಗಿದೆ.

ದೇಶದ ಪ್ರಮುಖ ಐದು ಮೆಟ್ರೋ ನಗರಗಳಲ್ಲಿನ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ
ದೇಶದ ಪ್ರಮುಖ ಐದು ಮೆಟ್ರೋ ನಗರಗಳಲ್ಲಿನ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ

By

Published : Oct 7, 2021, 9:16 AM IST

Updated : Oct 7, 2021, 12:12 PM IST

ಮುಂಬೈ:ಇಂದೂ ಕೂಡ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್​​ ಮೇಲೆ 29 ರಿಂದ 35 ಪೈಸೆ ಹಾಗೂ ಡೀಸೆಲ್​ ಮೇಲೆ 33 ರಿಂದ 38 ಪೈಸೆಯನ್ನು ತೈಲ ಕಂಪನಿಗಳು ಹೆಚ್ಚಿಸಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 34 ಪೈಸೆ ಏರಿಕೆಯೊಂದಿಗೆ ಲೀಟರ್ ಪೆಟ್ರೋಲ್ ದರ 103.24 ರೂ. ಹಾಗೂ 35 ಪೈಸೆ ಹೆಚ್ಚಳದೊಂದಿಗೆ ಡೀಸೆಲ್​ ದರ 91.77 ರೂ.ಗೆ ಏರಿಕೆಯಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 31 ಪೈಸೆ ಏರಿಕೆಯೊಂದಿಗೆ ಲೀಟರ್​ ಪೆಟ್ರೋಲ್ ಬೆಲೆ 106.83ಕ್ಕೆ ಹಾಗೂ ಬರೋಬ್ಬರಿ 37 ಪೈಸೆ ಹೆಚ್ಚಳದೊಂದಿಗೆ ಡೀಸೆಲ್​ ದರ 97.40 ರೂ.ಗೆ ಏರಿಕೆಯಾಗಿದೆ.

ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಕಂಪನಿಗಳು ಅಬಕಾರಿ ಸುಂಕಗಳ ಆಧಾರದ ಮೇಲೆ ಇಂಧನ ದರವನ್ನು ಹೆಚ್ಚಿಸುತ್ತಿರುತ್ತವೆ. ದೇಶದ ಪ್ರಮುಖ ಐದು ಮೆಟ್ರೋ ನಗರಗಳಲ್ಲಿನ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ.

ದೇಶದ ಪ್ರಮುಖ ಐದು ಮೆಟ್ರೋ ನಗರಗಳಲ್ಲಿನ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ

ಕೋವಿಡ್​ ಎರಡನೇ ಅಲೆ ಆರಂಭದಿಂದ ಇಂದಿನವರೆಗೂ ದೇಶದಲ್ಲಿ ಇಂಧನ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ದರ ಗಗನಕ್ಕೇರುತ್ತಲೇ ಇದ್ದು, ಸಾಂಕ್ರಾಮಿಕದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

Last Updated : Oct 7, 2021, 12:12 PM IST

ABOUT THE AUTHOR

...view details