ಮುಂಬೈ:ಸತತ ನಾಲ್ಕನೇ ದಿನವೂ ಇಂಧನ ದರ ಹೆಚ್ಚಳವಾಗಿದ್ದು, ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೈಲ ಕಂಪನಿಗಳು ತಲಾ 35 ಪೈಸೆ ಹೆಚ್ಚಿಸಿದ್ದು, ಇಂಧನ ದರ ದಾಖಲೆ ಮಟ್ಟ ತಲುಪಿದೆ. ಅಕ್ಟೋಬರ್ 25 ಮತ್ತು 27ರ ನಡುವೆ ದರಗಳಲ್ಲಿ ಯಾವುದೇ ಬದಲಾವಣೆ ಇರಲಿಲ್ಲ.
ದೇಶದ ಬಹುತೇಕ ನಗರಗಳಲ್ಲಿ ಈಗಾಗಲೇ ಪೆಟ್ರೋಲ್ ದರ ಶತಕದ ಗಡಿ ದಾಟಿದೆ. ಕೆಲ ನಗರಗಳಲ್ಲಿ ಡೀಸೆಲ್ ಬೆಲೆಯೂ ನೂರರ ಗಡಿ ತಲುಪಿದ್ದು, ಕೆಲ ನಗರಗಳಲ್ಲಿ ಶತಕದ ಸಮೀಪದಲ್ಲಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ಲೀಟರ್ ಪೆಟ್ರೋಲ್ ದರ 109.34 ರೂ.ಗೆ ಏರಿಕೆಯಾಗಿದ್ದು, ಡೀಸೆಲ್ ಬೆಲೆ 98.07 ರೂ. ಇದೆ.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ ಬರೋಬ್ಬರಿ 113.15 ರೂ. ಹಾಗೂ ಡೀಸೆಲ್ ದರ 104.09 ರೂ.ಗೆ ಏರಿಕೆಯಾಗಿದೆ. ಮಧ್ಯಪ್ರದೇಶದ ಅನೇಕ ನಗರಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆ 120 ರೂ. ಗಡಿ ದಾಟಿದ್ದು, ವಾಹನ ಸವಾರರು ಬೆಚ್ಚಿ ಬಿದ್ದಿದ್ದಾರೆ.
ದೇಶದ ಪ್ರಮುಖ ಐದು ಮೆಟ್ರೋ ನಗರಗಳಲ್ಲಿನ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ:
ಮೆಟ್ರೋ ನಗರಗಳಲ್ಲಿನ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಕಂಪನಿಗಳು ಅಬಕಾರಿ ಸುಂಕಗಳ ಆಧಾರದ ಮೇಲೆ ಇಂಧನ ದರವನ್ನು ಹೆಚ್ಚಿಸುತ್ತಿರುತ್ತವೆ.