ಕರ್ನಾಟಕ

karnataka

ETV Bharat / bharat

ಪೆಟ್ರೋಲ್‌, ಡೀಸೆಲ್ 80 ಪೈಸೆ ಹೆಚ್ಚಳ: ಕಳೆದ 16 ದಿನಗಳಲ್ಲಿ 10 ರೂ. ದರ ಏರಿಕೆ - ಇಂಧನ ಬೆಲೆ

ತೈಲ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಕಳೆದ 16 ದಿನಗಳಲ್ಲಿ 10 ರೂ. ಇಂಧನ ಬೆಲೆ ಹೆಚ್ಚಾಗಿದೆ. ದೇಶದ ಮಹಾನಗರಗಳಲ್ಲಿ ಇಂದಿನ ದರಪಟ್ಟಿ ಹೀಗಿದೆ.

ಪೆಟ್ರೋಲ್‌ ಡೀಸೆಲ್ ದರ
ಪೆಟ್ರೋಲ್‌ ಡೀಸೆಲ್ ದರ

By

Published : Apr 6, 2022, 8:39 AM IST

ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿ ಹೋಗಿರುವ ದೇಶದ ಜನತೆಗೆ ನಿತ್ಯ ತೈಲ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ. ಪ್ರತಿ ಲೀಟರ್‌ಗೆ ತಲಾ 80 ಪೈಸೆ ಹೆಚ್ಚಿಸಲಾಗಿದೆ.

ಕಳೆದ 16 ದಿನಗಳಲ್ಲಿ ಲೀಟರ್‌ಗೆ 10 ರೂ. ಏರಿಕೆಯಾಗಿದೆ. ಸ್ಥಳೀಯ ತೆರಿಗೆಗಳ ಪ್ರಕಾರ, ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ. ದೆಹಲಿಯಲ್ಲಿ ಸದ್ಯ ಪೆಟ್ರೋಲ್ ಬೆಲೆ ಲೀಟರ್​ಗೆ ನಿನ್ನೆ 104.61 ರೂ. ಇದ್ದು, ಇಂದು 105.41 ರೂ.ಗೆ ಏರಿಕೆಯಾಗಿದೆ. ಹಾಗೆಯೇ ಡೀಸೆಲ್ ಲೀಟರ್‌ಗೆ 95.87 ರೂ. ನಿಂದ 96.67 ರೂ.ಗೆ ಏರಿಕೆಯಾಗಿದೆ.

ಮುಂಬೈನಲ್ಲಿ ಪೆಟ್ರೋಲ್ 120.51 ರೂ., ಡೀಸೆಲ್ 104.77 ರೂ., ಚೆನ್ನೈನಲ್ಲಿ ಪೆಟ್ರೋಲ್ 110.86 ರೂ., ಡೀಸೆಲ್ 100.95 ರೂ., ಕೋಲ್ಕತ್ತಾದಲ್ಲಿ ಪೆಟ್ರೋಲ್ 115.12 ರೂ., ಡೀಸೆಲ್ 99.83 ರೂ. ಹಾಗೂ ಬೆಂಗಳೂರಿನಲ್ಲಿ ಪೆಟ್ರೋಲ್ 111.09 ರೂ., ಡೀಸೆಲ್ 94.79 ರೂ. ರೂಪಾಯಿ ಇದೆ.

ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ತೀವ್ರ ಜಿಗಿತ ಕಂಡ ಪರಿಣಾಮ ಭಾರತದಲ್ಲಿ ದರಗಳು ಹೆಚ್ಚಾಗುತ್ತಿವೆ.

ಇದನ್ನೂ ಓದಿ;'ಕೌಂಟರ್-ಸೈಕ್ಲಿಕಲ್ ಕ್ಯಾಪಿಟಲ್ ಬಫರ್' ಸಕ್ರಿಯಗೊಳಿಸುವ ಅಗತ್ಯವಿಲ್ಲ: ಆರ್​ಬಿಐ

ABOUT THE AUTHOR

...view details