ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಪೂರೈಕೆ ಕಂಪನಿಗಳು ಕಳೆದ ಆರು ದಿನಗಳ ಅವಧಿಯಲ್ಲಿ ಐದನೇ ಬಾರಿಗೆ ತೈಲ ಬೆಲೆ ಏರಿಸಿವೆ. ಈ ಮೂಲಕ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ 50 ಮತ್ತು 55 ಪೈಸೆಯಷ್ಟು ತುಟ್ಟಿಯಾಗಿವೆ. ಇದೇ ವೇಳೆ, ಒಂದು ವಾರದ ಬೆಳವಣಿಗೆಯನ್ನು ನೋಡುವುದಾದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆೆಲೆಗಳು ಕ್ರಮವಾಗಿ ₹3.70 ಹಾಗು ₹3.75 ಯಷ್ಟು ಹೆಚ್ಚಳವಾಗಿದ್ದನ್ನು ಗಮನಿಸಬಹುದು.
ದೆಹಲಿಯಲ್ಲಿ ಸದ್ಯ ಲೀ ಪೆಟ್ರೋಲ್ ಬೆಲೆ ₹99.11 ಇದೆ. ಅದೇ ರೀತಿ ಡೀಸೆಲ್ ಬೆಲೆ ₹90.42 ಆಗಿದೆ. ಬೆಂಗಳೂರಿನಲ್ಲಿ ಲೀ ಪೆಟ್ರೋಲ್ ಬೆಲೆ ₹100.58 ಇದ್ದು, ಡೀಸೆಲ್ ₹100.14 ಬೆಲೆ ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಲೀ.ಗೆ ₹113.88 ಇದ್ದರೆ, ಡೀಸೆಲ್ ₹98.13 ಇದೆ. ದೇಶದ ವಾಣಿಜ್ಯ ನಗರಿಯಲ್ಲಿ ಉಭಯ ತೈಲಗಳಲ್ಲಿ ಕ್ರಮವಾಗಿ 53 ಪೈಸೆ ಮತ್ತು 58 ಪೈಸೆ ಹೆಚ್ಚಳವಾಗಿದೆ.