ಕರ್ನಾಟಕ

karnataka

ETV Bharat / bharat

ದಾಖಲೆ ಮಟ್ಟದಲ್ಲಿ ತೈಲ ಬೆಲೆ ಏರಿಕೆ: ಇಂದಿನ ಪೆಟ್ರೋಲ್, ಡೀಸೆಲ್ ದರ ಪರಿಶೀಲಿಸಿ - fuel rate

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ದೇಶಾದ್ಯಂತ ಮತ್ತೆ ಏರಿಕೆ ಕಂಡಿದೆ. ಬೆಂಗಳೂರು, ಮುಂಬೈ, ಚೆನ್ನೈ ಸೇರಿದಂತೆ ಪ್ರಮುಖ ನಗರಗಳಲ್ಲಿ ತೈಲ ದರ ಎಷ್ಟಿದೆ ಎಂದು ಇಲ್ಲಿದೆ ನೋಡಿ ಮಾಹಿತಿ.

diesel prices
diesel prices

By

Published : Oct 28, 2021, 9:51 AM IST

ನವದೆಹಲಿ: ಇಂದೂ ಸಹ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್​​ ಬೆಲೆಯನ್ನು 34 ರಿಂದ 35 ಪೈಸೆ ಹಾಗೂ ಡೀಸೆಲ್​ ಬೆಲೆಯನ್ನು 35 ರಿಂದ 37 ಪೈಸೆ ಹೆಚ್ಚಿಸಿವೆ.

ಕಳೆದ ಕೆಲ ದಿನಗಳಿಂದ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 108.29 ರೂಪಾಯಿ ಹಾಗೂ ಡೀಸೆಲ್​ ದರ 97.02 ರೂಪಾಯಿ ಇದೆ.

ದೇಶದ ಪ್ರಮುಖ ಮಹಾನಗರಗಳಲ್ಲಿ ತೈಲ ದರ:

ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 114.14 ಕ್ಕೆ ಹಾಗೂ ಲೀಟರ್ ಡೀಸೆಲ್ 105.12 ರೂ. ಗೆ ಮಾರಾಟವಾಗುತ್ತಿದೆ. ಕೋಲ್ಕತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 108.78 ಕ್ಕೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ದರ 100.14 ರೂ. ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪ್ರತಿ ಲೀಟರ್​ಗೆ ಪೆಟ್ರೋಲ್​ಗೆ 105.13 ರೂ. ಇದ್ದು, ಲೀಟರ್ ಡೀಸೆಲ್ 101.25 ಕ್ಕೆ ಲಭ್ಯವಿದೆ.

ದೇಶದ ಪ್ರಮುಖ ಮಹಾನಗರಗಳಲ್ಲಿ ತೈಲ ದರ

ಬೆಂಗಳೂರಿನ ಇಂಧನ ಬೆಲೆ:

  • ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 112.06 ಕ್ಕೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ದರ 102.98 ರೂ. ಗೆ ಏರಿಕೆಯಾಗಿದೆ.
  • ತಿರುವನಂತಪುರಂನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್​ ದರ 110.54 ರೂ. ಇದ್ದು, ಡೀಸೆಲ್ ದರ 104.25 ರೂ. ಇದೆ.
  • ಗಾಂಧಿನಗರದಲ್ಲಿ ಲೀಟರ್‌ ಪೆಟ್ರೋಲ್​ ಬೆಲೆ 105.14 ರೂ. ಇದೆ. ಹಾಗೆಯೇ ಪ್ರತಿ ಲೀಟರ್‌ ಡೀಸೆಲ್ 104.78 ರೂ.ಗಳಿಗೆ ದೊರೆಯುತ್ತಿದೆ.
  • ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ಡೀಸೆಲ್​ ಬೆಲೆ ನೂರರ ಗಡಿ ದಾಟಿದ್ದು, ಭೋಪಾಲ್‌ನಲ್ಲಿ ಲೀಟರ್​ ಪೆಟ್ರೋಲ್ ಅನ್ನು 116.98 ರೂ.ಗೆ ಮತ್ತು ಡೀಸೆಲ್ ಅನ್ನು 106.38 ರೂ.ಗೆ ಖರೀದಿಸಲಾಗುತ್ತಿದೆ.
  • ಹೈದರಾಬಾದ್​ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 112.64 ರೂ. ಇದ್ದು, ಡೀಸೆಲ್ 105.84 ರೂ.ಗೆ ದೊರೆಯುತ್ತಿದೆ.

ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಕಂಪನಿಗಳು ಅಬಕಾರಿ ಸುಂಕಗಳ ಆಧಾರದ ಮೇಲೆ ಇಂಧನ ದರವನ್ನು ಹೆಚ್ಚಿಸುತ್ತಿರುತ್ತವೆ.

ABOUT THE AUTHOR

...view details