ಕರ್ನಾಟಕ

karnataka

ETV Bharat / bharat

ಏರುತ್ತಿರುವ ತೈಲ ಬೆಲೆ, ಗ್ರಾಹಕರ ಜೇಬಿಗೆ ಕತ್ತರಿ: ಬೆಂಗಳೂರಿನಲ್ಲಿ ಪೆಟ್ರೋಲ್​ ಬೆಲೆ ಎಷ್ಟು?

ಇಂದು ಮತ್ತೆ ಪೆಟ್ರೋಲ್-ಡೀಸೆಲ್​ ಬೆಲೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಲೀಟರ್​ ಪೆಟ್ರೋಲ್​ ದರ 104.58 ರೂಪಾಯಿಗೆ ತಲುಪಿದೆ. ಲೀಟರ್​ ಡೀಸೆಲ್​ ದರ 95.09 ರೂಪಾಯಿ ಆಗಿದೆ.

petrol-diesel-price
ತೈಲ ಬೆಲೆ

By

Published : Jul 12, 2021, 9:06 AM IST

ನವದೆಹಲಿ/ಬೆಂಗಳೂರು:ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮತ್ತೆ ಪೆಟ್ರೋಲ್-ಡೀಸೆಲ್​ ಬೆಲೆ ಏರಿಕೆ ಮಾಡಿವೆ. ಮುಂಬೈ ಮಹಾನಗರದಲ್ಲಿ ಪ್ರತಿ ಲೀಟರ್ ಬೆಲೆ 107.20 ರೂಪಾಯಿಗೆ ಬಂದು ನಿಂತಿದೆ. ಡೀಸೆಲ್​ ಬೆಲೆ 97.29 ರೂ. ಆಗಿದೆ.

ಬೆಂಗಳೂರಿನಲ್ಲಿ ಹೀಗಿದೆ ದರ: ಬೆಂಗಳೂರಿನಲ್ಲಿ ಲೀಟರ್​ ಪೆಟ್ರೋಲ್​ ದರ 104.58 ರೂಪಾಯಿಗೆ ತಲುಪಿದ್ದು, ಲೀಟರ್​ ಡೀಸೆಲ್​ ದರ 95.09 ರೂಪಾಯಿ ಆಗಿದೆ.

ಇಂದು ದೇಶಾದ್ಯಂತ ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಕಂಡಿದ್ದು, ರಾಜಧಾನಿ ದೆಹಲಿಯಲ್ಲಿ ಬೆಲೆ 100ರ ಗಡಿ ದಾಟಿದೆ. ಲೀಟರ್​ ಪೆಟ್ರೋಲ್ ಬೆಲೆ 101.19 ಮತ್ತು ಡೀಸೆಲ್​ ಬೆಲೆ 89.72 ರೂ. ಆಗಿದೆ. ಕೋಲ್ಕತ್ತಾದಲ್ಲಿ ಲೀಟರ್​ ಪೆಟ್ರೋಲ್​ ದರ 101.35 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ ಲೀಟರ್​ ಡೀಸೆಲ್​​ ದರ 92.81 ರೂ.ಇದೆ.

ಇದನ್ನು ಓದಿ: Video: ಗುಂಡ್ಯ–ಕುಕ್ಕೆ ಸುಬ್ರಹ್ಮಣ್ಯ ರಸ್ತೆಯಲ್ಲಿ ವಾಹನ ಸವಾರರನ್ನು ಅಟ್ಟಾಡಿಸಿದ ಒಂಟಿ ಸಲಗ!

ಭೋಪಾಲ್​ನಲ್ಲಿ ಲೀಟರ್​ ಪೆಟ್ರೋಲ್​ ದರ 109.53 ರೂಪಾಯಿಗೆ ಏರಿಕೆಯಾಗಿದ್ದು, ಡೀಸೆಲ್​ ಬೆಲೆ 92.81 ಆಗಿದೆ. ಚೆನ್ನೈನಲ್ಲಿ 101.93 ರೂ. ಪೆಟ್ರೋಲ್​ ಬೆಲೆಯಾಗಿದ್ದು, ಡೀಸೆಲ್​ ಬೆಲೆ 94.25 ರೂ.ಗೆ ತಲುಪಿದೆ.

ABOUT THE AUTHOR

...view details