ನವದೆಹಲಿ:ಒಂದು ದಿನದ ವಿರಾಮದ ಬಳಿಕ ತೈಲ ಮಾರುಕಟ್ಟೆ ಕಂಪನಿಗಳು (OMC) ಪೆಟ್ರೋಲ್, ಡೀಸೆಲ್ ದರವನ್ನು ಮತ್ತೆ ಏರಿಕೆ ಮಾಡಿವೆ.
ನವದೆಹಲಿಯಲ್ಲಿ 27 ಪೈಸೆ ಏರಿಕೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ದರ 95.03 ತಲುಪಿದೆ. ಡೀಸೆಲ್ ಬೆಲೆ 29 ಪೈಸೆ ಏರಿಕೆಯೊಂದಿಗೆ ಪ್ರತಿ ಲೀಟರ್ಗೆ 85.65 ಆಗಿದೆ.
ಇತರೆ ನಗರಗಳಿಗೆ ಹೋಲಿಸಿದರೆ ವಾಣಿಜ್ಯ ನಗರಿ ಮುಂಬೈನಲ್ಲಿ ಯಾವಾಗಲೂ ಪೆಟ್ರೋಲ್ ದರ ಕೊಂಚ ಜಾಸ್ತಿಯೇ ಇರುತ್ತದೆ. ಕಳೆದ ಮೇ 29 ರಂದು ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 100 ರ ಗಡಿ ದಾಟಿತ್ತು. ಇಂದಿನ ಏರಿಕೆಯೊಂದಿಗೆ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 101.25 ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 93.10 ಆಗಿದೆ.
ಪ್ರಮುಖ ನಗರಗಳ ಪೆಟ್ರೋಲ್, ಡೀಸೆಲ್ ದರ:
ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಇಂಧನ ದರ ಗಗನಕ್ಕೇರಿದೆ. ಕಳೆದ ತಿಂಗಳು ಮೊದಲ ಬಾರಿಗೆ ಭೋಪಾಲ್ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರದ 100 ರೂ. ಆಗಿತ್ತು. ಆ ಬಳಿಕ ರಾಜಸ್ಥಾನದ ಜೈಪುರದಲ್ಲೂ ಪೆಟ್ರೋಲ್ ದರ ಶತಕ ಬಾರಿಸಿತ್ತು.
ಇಂದು ಭೋಪಾಲ್ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 103.17 ಮತ್ತು ಜೈಪುರದಲ್ಲಿ 101.59 ಆಗಿದೆ. ರಾಜಸ್ತಾನದ ಗಂಗಾನಗರ ಜಿಲ್ಲೆಯಲ್ಲಿ ದೇಶದಲ್ಲೇ ಅತಿ ಹೆಚ್ಚು ದರ ಏರಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ದರ 105.33 ಇದೆ. ಡೀಸೆಲ್ ದರ 98.20 ಆಗಿದೆ.
ಬೆಂಗಳೂರಿನ ತೈಲ ಬೆಲೆ:
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 28 ಪೈಸೆ ಏರಿಕೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ದರ 97.92 ಮತ್ತು 30 ಪೈಸೆ ಏರಿಕೆಯೊಂದಿಗೆ ಪ್ರತಿ ಲೀಟರ್ ಡೀಸೆಲ್ ದರ 90.81 ಆಗಿದೆ.