ಕರ್ನಾಟಕ

karnataka

ETV Bharat / bharat

ಗ್ರಾಹಕರಿಗೆ ಬಿಗ್ ಶಾಕ್: ಪೆಟ್ರೋಲ್, ಡೀಸೆಲ್​, CNG ದರ ಏರಿಕೆ! - ಪೂರೈಕೆ ಸರಣಿ ನಿರ್ವಹಣೆ

ದಿನೇದಿನೆ ತೈಲ ದರ ಏರಿಕೆಯಾಗಿದ್ದು, ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಅಲ್ಲದೆ ತಿಂಗಳ ಆರಂಭದಲ್ಲಿ ಸಿಎನ್​ಜಿಯನ್ನು ಪರಿಷ್ಕರಿಸಲಾಗಿದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿದೆ.

ಗ್ರಾಹಕರಿಗೆ ಬಿಗ್ ಶಾಕ್
ಗ್ರಾಹಕರಿಗೆ ಬಿಗ್ ಶಾಕ್

By

Published : Jul 8, 2021, 8:26 AM IST

ದೆಹಲಿ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೈಸರ್ಗಿಕ ಅನಿಲ ದರ ಏರಿಕೆಯಾಗಿದ್ದು, ಮತ್ತೆ ಗ್ರಾಹಕರಿಗೆ ಬಿಗ್​ ಶಾಕ್ ನೀಡಿದೆ. ಈ ತಿಂಗಳ ಆರಂಭದಲ್ಲಿ ಸಿಎನ್​ಜಿ ಚಿಲ್ಲರೆ ದರ ಕೆ.ಜಿಗೆ 43.40 ರೂ.ನಿಂದ 44.30 ರೂಪಾಯಿಗೆ ಪರಿಷ್ಕರಿಸಲಾಗಿದೆ. ಪಿಎನ್​ಜಿಯ ದೇಶೀಯ ಬೆಲೆ ಎಸ್​ಸಿಎಂ (ಪೂರೈಕೆ ಸರಣಿ ನಿರ್ವಹಣೆ) 29.66 ರೂಪಾಯಿಯಷ್ಟಿದೆ.

ಇಂದು ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಸಿಎನ್‌ಜಿ ಚಿಲ್ಲರೆ ಬೆಲೆ ಕೆಜಿಗೆ 49.08 ರಿಂದ 49.98 ರೂ.ಗೆ ಪರಿಷ್ಕರಿಸಲಾಗಿದೆ. ಪಿಎನ್‌ಜಿ ದೇಶೀಯ ಬೆಲೆ ಎಸ್‌ಸಿಎಂಗೆ 29.61 ರೂ ನಷ್ಟಿದೆ.

ತೈಲ ದರ ಏರಿಕೆ

ದೆಹಲಿಯಲ್ಲಿ ಇಂದು ಪ್ರತಿ ಲೀಟರ್​ ಪೆಟ್ರೋಲ್​ಗೆ 35 ಪೈಸೆ ಹೆಚ್ಚಳವಾಗಿದ್ದು, ಸದ್ಯ ಪೆಟ್ರೋಲ್ ದರ 100.56 ರೂಪಾಯಿ ಆಗಿದೆ. ಲೀಟರ್​ ಡೀಸೆಲ್​ಗೆ 9 ಪೈಸೆ ಹೆಚ್ಚಳವಾಗಿದ್ದು 89.62 ರೂಪಾಯಿಯಿದೆ.

ಭೋಪಾಲ್​ನಲ್ಲಿ ಲೀಟರ್​ ಪೆಟ್ರೋಲ್​ಗೆ 25 ಪೈಸೆ ಹೆಚ್ಚಳವಾಗಿದ್ದು, ಪ್ರಸ್ತುತ ಪೆಟ್ರೋಲ್ ಬೆಲೆ 108.88 ರಷ್ಟಿದೆ. ಡೀಸೆಲ್ ದರ ಬದಲಾಗದೆ 98.40 ರೂಪಾಯಿಯಷ್ಟಿದೆ.

ಬೆಂಗಳೂರಲ್ಲಿ ಪೆಟ್ರೋಲ್​ ಪ್ರತಿ ಲೀಟರ್​ ದರ 103.93 ಇದ್ದು, ಡೀಸೆಲ್ ಪ್ರತಿ ಲೀಟರ್​ ಬೆಲೆ​ 94.89 ಇದೆ.

ABOUT THE AUTHOR

...view details